ಪವನ್ ಕಲ್ಯಾಣ್ ಅಭಿಮಾನಿಗಳು ಅರೆಸ್ಟ್

ಆಂಧ್ರಪ್ರದೇಶದಲ್ಲಿ ಹಾಲು ಸುರಿದು ಥಿಯೇಟರ್‌ಗೆ ಹಾನಿ ಮಾಡಿದ್ದ ಪವನ್ ಕಲ್ಯಾಣ್ ಅಭಿಮಾನಿಗಳನ್ನು ಬಂಧಿಸಲಾಗಿದೆ.

ಪವನ್ ಕಲ್ಯಾಣ್ ಅವರ ಬಹು ನಿರೀಕ್ಷಿತ ಚಿತ್ರ ‘ಬ್ರೋ’ ಜುಲೈ 28 ರಂದು ಥಿಯೇಟರ್‌ ಗಳಲ್ಲಿ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ಹಬ್ಬಕ್ಕಿಂತ ಕಡಿಮೆಯಿಲ್ಲದಂತೆ ಸಂಭ್ರಮಾಚರಣೆ ಮಾಡಿದ್ದಾರೆ. ಹಲವಾರು ಅಭಿಮಾನಿಗಳು ಆಂಧ್ರಪ್ರದೇಶದ ಥಿಯೇಟರ್ ಪರದೆಯ ಮೇಲೆ ಅಭಿಷೇಕವನ್ನು ಮಾಡಿ ಹಾಲು ಸುರಿಯುತ್ತಾರೆ. ಇದರಿಂದ ಪರದೆಗೆ ಹಾನಿಯಾಗಿದೆ. ಜುಲೈ 28 ರಂದು ನಡೆದ ಅಭಿಮಾನಿಗಳ ಕೃತ್ಯಕ್ಕಾಗಿ ಅವರಲ್ಲಿ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ.

ಸಮುದ್ರಕನಿ ನಿರ್ದೇಶನದ ಬ್ರೋ ಚಿತ್ರದಲ್ಲಿ ಸಾಯಿ ಧರಮ್ ತೇಜ್ ಜೊತೆಗೆ ಪ್ರಿಯಾ ಪ್ರಕಾಶ್ ವಾರಿಯರ್, ಕೇತಿಕಾ ಶರ್ಮಾ, ಬ್ರಹ್ಮಾನಂದಂ, ಸುಬ್ಬರಾಜು ಮತ್ತು ವೆನ್ನೆಲ ಕಿಶೋರ್ ನಟಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read