31.93 ಕೋಟಿ ರೂ.ವಂಚನೆ ಪ್ರಕರಣದಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ ಮಾಜಿ ಮ್ಯಾನೇಜರ್ ಅರೆಸ್ಟ್

ಸಾಲದಾತರೊಂದಿಗೆ 31.93 ಕೋಟಿ ರೂಪಾಯಿ ವಂಚನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಪಾಟ್ನಾ ಮೂಲದ ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಮಾಜಿ ಶಾಖಾ ವ್ಯವಸ್ಥಾಪಕನನ್ನು ಜಾರಿ ನಿರ್ದೇಶನಾಲಯ(ಇಡಿ) ಮನಿ ಲಾಂಡರಿಂಗ್ ಆರೋಪದ ಮೇಲೆ ಬಂಧಿಸಿದೆ ಎಂದು ಸಂಸ್ಥೆ ಮಂಗಳವಾರ ತಿಳಿಸಿದೆ.

ಬ್ಯಾಂಕ್‌ನ ಬೋರಿಂಗ್ ರೋಡ್ ಶಾಖೆಯಲ್ಲಿ ನಿಯೋಜನೆಗೊಂಡಿದ್ದ ಸುಮಿತ್ ಕುಮಾರ್ ಅವರನ್ನು ಫೆಡರಲ್ ತನಿಖಾ ಸಂಸ್ಥೆ ಜುಲೈ 10 ರಂದು ಕಸ್ಟಡಿಗೆ ತೆಗೆದುಕೊಂಡಿತ್ತು.

ಇಡಿ ಅವರನ್ನು ಜುಲೈ 11 ರಂದು ವಿಶೇಷ ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್(ಪಿಎಂಎಲ್ಎ) ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ತರುವಾಯ, ನ್ಯಾಯಾಲಯವು ಜುಲೈ 17 ರಿಂದ ಜುಲೈ 21 ರವರೆಗೆ ಐದು ದಿನಗಳ ಕಾಲ ಆರೋಪಿಯನ್ನು ಇಡಿ ಕಸ್ಟಡಿಗೆ ಇಡಿ ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read