ಖಾಸಗಿ ಹೋಟೆಲ್​ನಲ್ಲಿ ಅಕ್ರಮ ಚಟುವಟಿಕೆ ದಂಧೆ: ಪೊಲೀಸರ ದಾಳಿ, ಹಲವರು ಅರೆಸ್ಟ್

ಖಾಸಗಿ ಹೋಟೆಲ್​ವೊಂದರಲ್ಲಿ ಕಾನೂನುಬಾಹಿರ ಲೈಂಗಿಕ ದಂಧೆ ನಡೆಸುತ್ತಿದ್ದ ಘಟನೆಯೊಂದು ಪಾಟ್ನಾದ ಬಿಹಾಟಾ ಎಂಬಲ್ಲಿ ಬೆಳಕಿಗೆ ಬಂದಿದೆ. ಈ ಅಕ್ರಮ ಚಟುವಟಿಕೆ ಸಂಬಂಧ ಪೊಲೀಸರು ಹತ್ತಕ್ಕೂ ಅಧಿಕ ಯುವತಿಯರು ಹಾಗೂ 10ಕ್ಕೂ ಅಧಿಕ ಪುರುಷರನ್ನು ಬಂಧಿಸಿದ್ದಾರೆ. ಸ್ಥಳೀಯ ಗ್ರಾಮಸ್ಥರು ನೀಡಿದ ಮಾಹಿತಿಯನ್ನು ಆಧರಿಸಿ ಪೊಲೀಸರು ಈ ದಾಳಿ ನಡೆಸಿದ್ದಾರೆ. ಸದ್ಯ ಪೊಲೀಸರು ಈ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಡಿಎಸ್ಪಿ ಡಾ. ಅನು ಕುಮಾರ್​, ಬಿಹಾಟಾದಲ್ಲಿ ಹೋಟೆಲ್​ ಪ್ರಿನ್ಸ್​ ಐಎನ್​ಎನ್​ ಹೆಸರಿನ ಸಂಸ್ಥೆಯು ಲೈಂಗಿಕ ಚಟುವಟಿಕೆ ನಡೆಸುತ್ತಿದೆ ಎಂದು ಹಲವಾರು ದಿನಗಳಿಂದ ಗ್ರಾಮಸ್ಥರು ಮಾಹಿತಿ ನೀಡುತ್ತಿದ್ದರು. ಈ ಹೋಟೆಲ್​ ಯುವಕ – ಯುವತಿಯರು ಅಕ್ರಮವಾಗಿ ಪ್ರವೇಶಿಸುತ್ತಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ ಬಳಿಕ ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದರು ಎನ್ನಲಾಗಿದೆ.

ಗ್ರಾಮಸ್ಥರು ನೀಡಿದ ಸುಳಿವನ್ನು ಆಧರಿಸಿದ ಪಾಟ್ನಾ ಪೊಲೀಸರು ವಿಶೇಷ ತಂಡ ರಚನೆ ಮಾಡಿದ್ದಾರೆ. ಖಾಸಗಿ ಹೋಟೆಲ್​ ಮೇಲೆ ದಾಳಿ ನಡೆಸಲಾಯ್ತು. ಘಟನಾ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಹಲವಾರು ಯುವಕರು ಹಾಗೂ ಯುವತಿಯರು ಕಂಡು ಬಂದಿದ್ದಾರೆ. ಅಕ್ರಮ ಚಟುವಟಿಕೆಗೆ ಸಂಬಂಧಿಸಿದಂತೆ ತಲಾ 12 ಯುವಕ ಹಾಗೂ ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read