ಭಾರೀ ಟೀಕೆ ಮತ್ತು ವಿವಾದ ಎದುರಿಸಿದ್ದ ಶಾರುಖ್ ಖಾನ್ ಅವರ ಪಠಾನ್ ಚಿತ್ರ ಗಳಿಕೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ.
ಗಳಿಕೆಯಲ್ಲಿ ಮುಂದಿರುವ ಪಠಾಣ್ ಚಿತ್ರ ಈಗ “ಭಾರತದಲ್ಲಿ ನಂ 1 ಹಿಂದಿ ಚಲನಚಿತ್ರ” ಆಗಿದೆ. ಪಠಾಣ್ ನಂತರ ʼಬಾಹುಬಲಿ: ದಿ ಕನ್‌ಕ್ಲೂಷನ್ʼ, ಕೆಜಿಎಫ್: 2 (ಹಿಂದಿ ಡಬ್) ಮತ್ತು ಅಮೀರ್ ಖಾನ್ ಅವರ ʼದಂಗಲ್ʼ ಚಿತ್ರಗಳಿವೆ.
ಸಿನಿಮಾ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಈ ಬಗ್ಗೆ ವರದಿ ಮಾಡಿದ್ದಾರೆ. ಈ ವಾರ 1.5 ಕೋಟಿ ಗಳಿಸಿರುವ ಚಿತ್ರವು ಇದುವರೆಗೆ ಭಾರತದಲ್ಲಿ ಒಟ್ಟು 511.70 ಕೋಟಿ ರೂಪಾಯಿ ಗಳಿಸಿದೆ.
ಮಾರುಕಟ್ಟೆಯಲ್ಲಿ ಗಮನಾರ್ಹ/ಹೊಸ ಚಲನಚಿತ್ರಗಳ ಅನುಪಸ್ಥಿತಿಯು ಪಠಾಣ್‌ಗೆ ದೊಡ್ಡ ಉತ್ತೇಜನವನ್ನು ನೀಡಿದೆ. ಮತ್ತೊಂದು ವಾರ ಕೂಡ ಸಿನಿಮಾ ಇನ್ನಷ್ಟು ಹೆಚ್ಚು ಗಳಿಕೆ ಮಾಡಲಿದೆ. ಪಠಾಣ್ ತಮಿಳು ಮತ್ತು ತೆಲುಗು ಭಾಷೆಯಲ್ಲಿ ಒಟ್ಟು 18.26 ಕೋಟಿ ಗಳಿಸಿದೆ.
ನಾಲ್ಕು ವರ್ಷಗಳ ಬಳಿಕ ಶಾರುಖ್ ಖಾನ್ ಅವರ ಮೊದಲ ಪ್ರಮುಖ ಪಾತ್ರದ ಪಠಾಣ್, ಪ್ರಭಾಸ್ ಅವರ ಬಾಹುಬಲಿ: ದಿ ಕನ್‌ಕ್ಲೂಷನ್, ಯಶ್ ಅವರ ಕೆಜಿಎಫ್: ಅಧ್ಯಾಯ 2 ಮತ್ತು ಅಮೀರ್ ಖಾನ್ ಅವರ ದಂಗಲ್ ಅನ್ನು ಈ ವಾರದ ಶುಕ್ರವಾರದ ಸಂಗ್ರಹಗಳೊಂದಿಗೆ ಮೀರಿಸಿದೆ. ಈ ಮೂಲಕ ಸಾರ್ವಕಾಲಿಕ ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಚಲನಚಿತ್ರವಾಗಿದೆ.
ಪಠಾಣ್ ಯಶ್ ರಾಜ್ ಫಿಲ್ಮ್ಸ್ ನ ಸ್ಪೈ ಯೂನಿವರ್ಸ್‌ನ ಒಂದು ಭಾಗವಾಗಿದೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಐಎಸ್‌ಐ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
TOP 4… HIGHEST GROSSING *HINDI* FILMS…
1. #Pathaan
2. #Baahubali2 #Hindi
3. #KGF2 #Hindi
4. #DangalNOTE: #India biz. Nett BOC. #Hindi version ONLY. pic.twitter.com/fay38eStHp
— taran adarsh (@taran_adarsh) March 3, 2023
Absence of notable / new films in the market gives #Pathaan a big boost… Numbers witness an upward trend on [sixth] Fri… Another strong weekend is on the cards… [Week 6] Fri 1.05 cr. Total: ₹ 511.70 cr. #Hindi. #India biz.
NOW NO. 1 *HINDI* FILM IN INDIA. pic.twitter.com/1lwaB3JbHM
— taran adarsh (@taran_adarsh) March 4, 2023