ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದ ‘ಪಠಾಣ್’: ಮೂರೇ ದಿನದಲ್ಲಿ 300 ಕೋಟಿ ರೂ. ಕಲೆಕ್ಷನ್

ಶಾರುಖ್ ಖಾನ್ ಅಭಿನಯದ ‘ಪಠಾಣ್’ ಮೂರೇ ದಿನದಲ್ಲಿ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ.  ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ‘ಪಠಾಣ್’ ಧೂಳೆಬ್ಬಿಸಿದ್ದು, ವಿಶ್ವಾದ್ಯಂತ 300 ಕೋಟಿ ರೂ. ಗೂ ಅಧಿಕ ಗಳಿಕೆ ಕಂಡಿದೆ.

ನಾಲ್ಕು ವರ್ಷಗಳ ನಂತರ ಶಾರುಖ್ ಖಾನ್ ಚಿತ್ರರಂಗಕ್ಕೆ ಮರಳಿರುವುದು ಅಭಿಮಾನಿಗಳಿಗೆ ಸಂಭ್ರಮ ಹೆಚ್ಚಿಸಿದೆ. ‘ಪಠಾಣ್’ ಶಾರುಖ್ ಖಾನ್ ಬ್ಲಾಕ್‌ ಬಸ್ಟರ್‌ ಗಳಲ್ಲಿ ಒಂದಾಗಿದೆ. ‘

ಬಿಡುಗಡೆಯಾದ ದಿನದಿಂದ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ನಟಿಸಿದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಬಂಪರ್ ಓಪನಿಂಗ್ ಪಡೆದಿದೆ. 3 ನೇ ದಿನದಂದು, ‘ಪಠಾಣ್’ ವಿಶ್ವಾದ್ಯಂತ 300 ಕೋಟಿ ರೂಪಾಯಿಗಳನ್ನು ದಾಟಲು ಯಶಸ್ವಿಯಾಗಿದೆ.

ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ, 3 ದಿನಗಳಲ್ಲಿ ‘ಪಠಾಣ್’ WW ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ರೂಪಾಯಿಗಳನ್ನು ದಾಟಿದೆ ಎಂದು ಹೇಳಿದ್ದಾರೆ.

https://twitter.com/rameshlaus/status/1619146182294659072

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read