ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ‘ಪಠಾಣ್’ ಪರಾಕ್ರಮ: ಎರಡೇ ದಿನದಲ್ಲಿ 235 ಕೋಟಿ ರೂ.ಗೂ ಅಧಿಕ ಗಳಿಕೆ

ಶಾರುಖ್ ಖಾನ್ ಅಭಿನಯದ ‘ಪಠಾಣ್’ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಧೂಳೆಬ್ಬಿಸಿದ್ದು, 2ನೇ ದಿನ ವಿಶ್ವಾದ್ಯಂತ 235 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ.

‘ಪಠಾಣ್’ ಮೂಲಕ ಶಾರುಖ್ ಖಾನ್ ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ‘ಪಠಾಣ್’ ಬಿಡುಗಡೆಯಾದ ಮೊದಲ ಶೋನಿಂದಲೂ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇದೇ ವೇಳೆ ವಿಶ್ವಾದ್ಯಂತ 235 ಕೋಟಿ ರೂ. ಗಳಿಸಿದೆ.

‘ಪಠಾಣ್’ ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಶಾರುಖ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ನಟಿಸಿರುವ ಈ ಚಿತ್ರ ಬಾಕ್ಸ್ ಆಫೀಸ್‌ ನಲ್ಲಿ ಬಂಪರ್ ಓಪನಿಂಗ್ ಪಡೆಯಿತು. ಚಿತ್ರವು ಭಾರತದಲ್ಲಿ 2 ನೇ ದಿನದಂದು ಸುಮಾರು 70 ಕೋಟಿ ರೂಪಾಯಿ ಗಳಿಸಿತು. ತಮಿಳು ಮತ್ತು ತೆಲುಗು ಡಬ್ಬಿಂಗ್ ಆವೃತ್ತಿಯು ಒಟ್ಟು 2 ರಿಂದ 3 ಕೋಟಿ ರೂ. ಸೇರಿ ‘ಪಠಾಣ್‌’ ಒಟ್ಟು ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್ ಮೊದಲ ದಿನ 100 ಕೋಟಿ ರೂ.

ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಪ್ರಕಾರ, ‘ಪಠಾಣ್’ 2 ದಿನಗಳಲ್ಲಿ WW ಬಾಕ್ಸ್ ಆಫೀಸ್‌ನಲ್ಲಿ 235 Crs ಗಳಿಕೆಯನ್ನು ದಾಟಿದೆ.

ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಮೊದಲ ಬಾರಿಗೆ ‘ಪಠಾಣ್’ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಬಂಡವಾಳ ಹೂಡಿದ್ದಾರೆ. ‘ಝೀರೋ’ (2018) ನಂತರ ಶಾರುಖ್ ಖಾನ್ ಅವರ ಪುನರಾಗಮನದ ಚಿತ್ರ ಇದಾಗಿದೆ.

https://twitter.com/rameshlaus/status/1618784747521736705

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read