ಪ್ರಯಾಣಿಕರಿಗೆ ಮುಖ್ಯ ಮಾಹಿತಿ: ನೈರುತ್ಯ ವಿಭಾಗದ 11 ವಿಶೇಷ ರೈಲುಗಳು ರದ್ದು

ಬೆಂಗಳೂರು: ಕೆಲವು ತಾಂತ್ರಿಕ ಕಾರಣಗಳಿಂದಾಗಿ ನೈರುತ್ಯ ರೈಲ್ವೆ 11 ವಿಶೇಷ ರೈಲುಗಳ ಸೇವೆಯನ್ನು ಮುಂದಿನ ಆದೇಶದವರೆಗೆ ರದ್ದು ಮಾಡಿದೆ.

ಜೂನ್ 16ರಂದು ವಿಶಾಖಪಟ್ಟಣಂ -ಸರ್.ಎಂ. ವಿಶ್ವೇಶ್ವರಯ್ಯ ನಿಲ್ದಾಣ(SMVT) ಬೆಂಗಳೂರು, ಜೂನ್ 17ರಂದು ಸರ್ ಎಂ.ವಿ. ನಿಲ್ದಾಣ ಬೆಂಗಳೂರು –ವಿಶಾಖಪಟ್ಟಣ, ಜೂನ್ 21ರಂದು ಸಂತ್ರಗಾಚ್ – SMVT ಬೆಂಗಳೂರು, ಜೂನ್ 23ರಂದು ಸರ್ ಎಂ.ವಿ. ನಿಲ್ದಾಣ ಬೆಂಗಳೂರು –ಸಂತ್ರಗಾಚ್, ಜೂನ್ 19ರಂದು SMVT ಬೆಂಗಳೂರು -ಮೌಲ್ಡ್ ಟೌನ್, ಜೂ. 22 ರಂದು ಮೌಲ್ಡ್ ಟೌನ್ – SMVT ಬೆಂಗಳೂರು, ಜೂ. 18ರಂದು SMVT ಬೆಂಗಳೂರು – ಗುವಾಹಟಿ, ಜೂನ್ 22ರಂದು ಗುವಾಹಟಿ – SMVT ಬೆಂಗಳೂರು ರೈಲನ್ನು ಮುಂದಿನ ಆದೇಶದವರೆಗೆ ರದ್ದು ಮಾಡಲಾಗಿದೆ.

ಗಯಾ -ಯಶವಂತಪುರ ರೈಲನ್ನು ಜೂ. 17ರಂದು ಒಂದು ಟ್ರಿಪ್, ಭಗತ್ ಕಿ ಕೋಠಿ SMVT ಬೆಂಗಳೂರು ರೈಲನ್ನು ಎರಡು ಕಡೆಗಳಲ್ಲಿ ಜೂನ್ 20, 23, 27 ಮತ್ತು 30ರಂದು ರದ್ದುಪಡಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read