69 ಲಕ್ಷ ರೂಪಾಯಿ ಚಿನ್ನವಿದ್ದ ಚಪ್ಪಲಿ ಧರಿಸಿಕೊಂಡು ಬಂದ ಪ್ರಯಾಣಿಕ ಅರೆಸ್ಟ್…!

ಚಪ್ಪಲಿಯಲ್ಲಿ 69.40 ಲಕ್ಷ ಮೌಲ್ಯದ ಚಿನ್ನದ ಗಟ್ಟಿಯನ್ನು ಕಳ್ಳಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಹಿಡಿದಿದ್ದಾರೆ.

“ಇಂಡಿಗೋ ಏರ್‌ವೇಸ್ ವಿಮಾನದಲ್ಲಿ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿದ್ದ ಈ ಪ್ರಯಾಣಿಕರನ್ನು ಚೆಕಿಂಗ್‌ಗೆಂದು ತಡೆದು ನಿಲ್ಲಿಸಲಾಯಿತು. ಸ್ಲಿಪ್ಪರ್‌ಗಳ ಕ್ಯಾವಿಟಿಯಲ್ಲಿ ಅಡಗಿಸಿಟ್ಟಿದ್ದ ನಾಲ್ಕು ಚಿನ್ನದ ಗಟ್ಟಿಗಳನ್ನು ಅವರಿಂದ ವಶಕ್ಕೆ ಪಡೆದಿದ್ದೇವೆ,” ಎಂದು ಕಸ್ಟಮ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

24 ಕ್ಯಾರೆಟ್ ಶುದ್ಧವಾಗಿರುವ 1.2 ಕೆಜಿ ಚಿನ್ನವನ್ನು ಈ ವೇಳೆ ವಶಕ್ಕೆ ಪಡೆಯಲಾಗಿದೆ.

ಮಾರ್ಚ್ 12ರಂದು ಈ ಘಟನೆ ನಡೆದಿದೆ. ಇಂಡಿಗೋ ವಿಮಾನ 6ಇ 76ನಲ್ಲಿ ಪ್ರಯಾಣಿಸುತ್ತಿದ್ದ ಈ ಪ್ರಯಾಣಿಕನನ್ನು ಅನುಮಾನದ ಮೇಲೆ ತಡೆದು ನಿಲ್ಲಿಸಿ ಪ್ರಶ್ನಿಸಿದಾಗ ತಾನು ಬ್ಯಾಂಕಾಕ್‌ಗೆ ವೈದ್ಯಕೀಯ ಕಾರಣಕ್ಕೆ ತೆರಳಿದ್ದಾಗಿ ತಿಳಿಸಿದ್ದಾನೆ. ಆದರೆ ಈ ಸಂಬಂಧ ಯಾವುದೇ ಪುರಾವೆ ಕೊಡಲು ಆತ ವಿಫಲನಾಗಿದ್ದಾನೆ.

ಇದಾದ ಬಳಿಕ ಈತನನ್ನು ತೀವ್ರ ತಪಾಸಣೆಗೆ ಒಳಪಡಿಸಿ, ಬ್ಯಾಗ್ ಹಾಗೂ ಚಪ್ಪಲಿಗಳನ್ನೂ ಶೋಧಿಸಿದ ವೇಳೆ ಚಿನ್ನದ ಗಟ್ಟಿಗಳು ಪತ್ತೆಯಾಗಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read