‘ಜಸ್ಟ್ ಮ್ಯಾರೀಡ್’ ಚಿತ್ರದಿಂದ ಬಂತು ‘ಪಾರ್ಟಿ ಸಾಂಗ್’

ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಅಭಿನಯಿಸಿರುವ ‘ಜಸ್ಟ್ ಮ್ಯಾರೀಡ್’ ಚಿತ್ರದ ಪಾರ್ಟಿ ಸಾಂಗ್ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದ್ದು, ಗಾನ ಪ್ರಿಯರ ಗಮನ ಸೆಳೆದಿದೆ. ‘ಕೇಳೋ ಮಚ್ಚಾ’ ಎಂಬ ಈ ಹಾಡಿಗೆ ನಕಾಶ್ ಅಜೀಜ್ ಧ್ವನಿಯಾಗಿದ್ದು, ಬಿ ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ನಾಗಾರ್ಜುನ ಶರ್ಮಾ ಸಾಹಿತ್ಯವಿದೆ.

ಸಿಆರ್ ಬಾಬಿ ನಿರ್ದೇಶನದ ಈ ಚಿತ್ರವನ್ನು ಎಬಿಬಿಎಸ್ ಸ್ಟುಡಿಯೋಸ್ ಲಾಂಛನದಲ್ಲಿ ನಿರ್ಮಾಣ ಮಾಡಲಾಗಿದ್ದು, ಶೈನ್ ಶೆಟ್ಟಿ ಅವರಿಗೆ ಜೋಡಿಯಾಗಿ ಅಂಕಿತ ಅಮರ್ ಅಭಿನಯಿಸಿದ್ದಾರೆ. ಇನ್ನುಳಿದಂತೆ ದೇವರಾಜ್, ಅನುಪ್ ಭಂಡಾರಿ, ಶ್ರುತಿ ಹರಿಹರನ್, ಸಾಕ್ಷಿ ಅಗರ್ವಾಲ್, ಅಚ್ಯುತ್ ಕುಮಾರ್, ಶ್ರೀಮನ್, ಶ್ರುತಿ ಕೃಷ್ಣ, ಮಾಳವಿಕಾ ಅವಿನಾಶ್, ರವಿಶಂಕರ್ ಗೌಡ, ಸಂಗೀತಾ ಅನಿಲ್, ವಾಣಿ ಹರಿಕೃಷ್ಣ, ವೇದಿಕಾ ಕಾರ್ಕಲ್, ಅಭಿನವ್ ವಿಶ್ವನಾಥನ್, ನೆಲಮಂಗಲ ಜಯರಾಂ, ರಕ್ಷಿತ್ ಕೌಪ್, ವಿವೇಕ್ ಚಕ್ರವರ್ತಿ ಆರ್, ಸುದರ್ಶನ್ ಜಿ ಭಾರದ್ವಾಜಘ್. , ನಂದಗೋಪಾಲ್ ಎಂಕೆ, ಸುಪ್ರಿಯಾ ಮಣಿಮಾರನ್, ಲಾವಣ್ಯ ಅಮರ್, ಪ್ರಿಯಾ ದರ್ಶಿನಿ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ವಿಕ್ರಂ ಮೋರ್ ಸಾಹಸ ನಿರ್ದೇಶನ, ರಘು ನಿಡುವಳ್ಳಿ ಸಂಭಾಷಣೆ, ಶ್ರೀಕಾಂತ್ ಸಂಕಲನವಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read