‘ಸಂಸತ್ ಸ್ಮೋಕ್ ಬಾಂಬ್’ ಪ್ರಕರಣ ನಮಗೆ ಎಚ್ಚರಿಕೆ ಗಂಟೆ : ಸ್ಪೀಕರ್ ಯು.ಟಿ ಖಾದರ್

ಬೆಳಗಾವಿ : ಸಂಸತ್ ಸ್ಮೋಕ್ ಬಾಂಬ್ ಪ್ರಕರಣ ನಮಗೆ ಎಚ್ಚರಿಕೆ ಗಂಟೆ ಎಂದು ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಾರೆ.

ಸಂಸತ್ ನಲ್ಲಿ ನಿನ್ನೆ ನಡೆದ ಅವಾಂತರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಖಾದರ್ ‘ ಯಾವಾಗ ಏನು ಬೇಕಾದರೂ ಆಗಬಹುದು, ಊಹೆ ಕೂಡ ಮಾಡುವುದಕ್ಕೆ ಆಗಲ್ಲ. ನಾವು ಎಚ್ಚರಿಕೆಯಿಂದಿರಬೇಕು. ಸಂಸತ್ ಗ್ಯಾಸ್ ಬಾಂಬ್ ಪ್ರಕರಣ ನಮಗೆ ಎಚ್ಚರಿಕೆ ಗಂಟೆ, ಜನಸಾಮಾನ್ಯರು ನಮಗೆ ಸಹಕಾರ ಕೊಡಬೇಕು ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ, ಪ್ರಜೆಗಳಿಗೆ ತೊಂದರೆ ಆಗದಂತೆ ಪಾಸ್ ವಿತರಣೆ ಮಾಡಲು ಸೂಚಿಸಲಾಗಿದೆ. ಜನರು ಇದಕ್ಕೆ ಸಹಕರಿಸಬೇಕು ಎಂದಿದ್ದಾರೆ.

ಬುಧವಾರ ಲೋಕಸಭೆಯ ಕಲಾಪದ ವೇಳೆ ಇಬ್ಬರು ಸಂದರ್ಶಕರ ಗ್ಯಾಲರಿಗೆ ನುಗ್ಗಿ ಹೊಗೆ ಹರಡಿದರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಸದನದ ಶೂನ್ಯ ವೇಳೆಯಲ್ಲಿ ಇಬ್ಬರು ವ್ಯಕ್ತಿಗಳು ಸಂದರ್ಶಕರ ಗ್ಯಾಲರಿಯಿಂದ ಸದನಕ್ಕೆ ಹಾರಿದರು ಮತ್ತು ಅವರಲ್ಲಿ ಒಬ್ಬರು ಒಂದು ಮೇಜಿನಿಂದ ಮುಂದಿನ ಮೇಜಿಗೆ ವೇಗವಾಗಿ ಜಿಗಿದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read