ಪಾರ್ಕಿಂಗ್ ವಿಚಾರವಾಗಿ ಯುವಕರ ನಡುವೆ ಗಲಾಟೆ: ವ್ಯಕ್ತಿಯನ್ನು ಹಿದಿದು ಹಿಗ್ಗಾಮುಗ್ಗಾ ಥಳಿಸಿದ ಗುಂಪು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪಾರ್ಕಿಂಗ್ ವಿಚಾರವಾಗಿ ಗಲಾಟೆ, ಹಲ್ಲೆ ಪ್ರಕರಣಗಳು ಆಗಾಗ ವರದಿಯಾಗುತ್ತಿರುತ್ತವೆ. ಇದೀಗ ಗಾಜಿಯಾಬಾದ್ ನಲ್ಲಿ ನಡೆದಿರುವ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಪಾರ್ಕಿಂಗ್ ವಿಚಾರವಾಗಿ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಯುವಕರ ಗುಂಪು ವ್ಯಕ್ತಿಯೊಬ್ಬನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಈ ಘಟನೆ ನಡೆದಿದೆ.

ರಸ್ತೆ ಮಧ್ಯೆಯೇ ಯುವಕನನ್ನು ಹಿಡಿದ 6 ಜನರ ಗುಂಪು ಮನಬಬಂದಂತೆ ಆತನಿಗೆ ಹೊಡೆದಿದ್ದಾರೆ. ಸ್ಥಳದಲ್ಲಿದ್ದ ಕೆಲವರು ಯವಕನ ರಕ್ಷಣೆಗೆ ಬಂದಿದ್ದಾರೆ. ಮನಬಂದಂತೆ ಥಳಿಸಿದ ಯುವಕರು ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಶಂಕರ್ ವಿಹಾರ್ ನಲ್ಲಿ ಕಳೆದ ವಾರ ಪಾರ್ಕಿಂಗ್ ವಿಚರವಾಗಿ ನಡೆದ ಗಲಾಟೆಯಲ್ಲಿ ವ್ಯಕ್ತಿ ಹಾಗೂ ಆತನ ಮಗುವಿಗೆ ಚಾಕುವಿನಿಂದ ಇರಿದಿದ್ದ ಘಟಬೆ ನಡೆದಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read