ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಭಾರತದ ಏಸ್ ಶೂಟರ್ ಮನು ಭಾಕರ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮಾತನಾಡಿ ಅಭಿನಂದಿಸಿದ್ದಾರೆ.
ತನ್ನ ಹೆಸರಿನಲ್ಲಿ ಎರಡು ದಾಖಲೆಗಳನ್ನು ಬರೆದಿರುವ ಭಾಕರ್, ಪ್ಯಾರಿಸ್ ನಲ್ಲಿ ಭಾರತದ ಪದಕಗಳ ಪಟ್ಟಿಯನ್ನು ಮೊದಲು ತೆರೆದು ಎರಡನೇ ಬಾರಿಗೆ ಒಲಿಂಪಿಕ್ಸ್ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಾಕರ್‌ರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಅಭಿನಂದನೆಗಳು ಮನು. ಸುದ್ದಿ ಕೇಳಿದ ನಂತರ ನಿಮ್ಮ ಗೆಲುವಿನ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ, ನೀವು 1 ಅಂಕದಿಂದ ಬೆಳ್ಳಿ ಪದಕವನ್ನು ಕಳೆದುಕೊಂಡಿದ್ದೀರಿ, ಆದರೆ ನೀವು ಕಂಚಿನ ಪದಕಕ್ಕೆ ಅರ್ಹರಾಗಿದ್ದೀರಿ ಎಂದು ಶ್ಲಾಘಿಸಿದ್ದಾರೆ.
ನಾನು ನಿಮಗೆ ನನ್ನ ಶುಭಾಶಯಗಳನ್ನು ಕಳುಹಿಸುತ್ತಿದ್ದೇನೆ. ಟೋಕಿಯೊ ಒಲಿಂಪಿಕ್ಸ್ ನಲ್ಲಿ ನಿಮ್ಮ ರೈಫಲ್ ಅಥವಾ ಪಿಸ್ತೂಲ್ ನಿಮಗೆ ದ್ರೋಹ ಬಗೆದಿತ್ತು. ಆದರೆ ನೀವು ಈ ಬಾರಿ ಎಲ್ಲವನ್ನೂ ಸರಿದೂಗಿಸಿದ್ದೀರಿ ಎಂದು ಅವರು ಹೇಳಿದ್ದಾರೆ.
ಇದಲ್ಲದೆ, ಪ್ರಧಾನ ಮಂತ್ರಿ ಅವರೊಂದಿಗಿನ ಸಂಭಾಷಣೆಯಲ್ಲಿ ಕ್ರೀಡಾಪಟುಗಳಿಗೆ ಸಾಧ್ಯವಾದಷ್ಟು ಸೌಲಭ್ಯಗಳು ಮತ್ತು ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಪ್ರಯತ್ನಿಸಿದೆ. ಭಾಕರ್ ಅವರು ಎಲ್ಲಾ ಸೌಲಭ್ಯಗಳನ್ನು ಹೊಂದಿರುವುದರಿಂದ ಅವರ ಪ್ರಯತ್ನಗಳು ಯಶಸ್ವಿಯಾಗಿದೆ ಎಂದು ನಗುತ್ತಾ ಉತ್ತರಿಸಿದ್ದಾರೆ.
ಇದಲ್ಲದೆ, ಮೋದಿ ಅವರು ಟ್ವೀಟ್ ಮಾಡಿ ಮನು ಭಾಕರ್ ಅವರನ್ನು ಅಭಿನಂದಿಸಿದ್ದಾರೆ. ಮನು ಭಾಕರ್ ಐತಿಹಾಸಿಕ ಪದಕ ಗಳಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತದ ಮೊದಲ ಪದಕವನ್ನು ಗೆದ್ದಿದ್ದಕ್ಕಾಗಿ ಅಭಿನಂದನೆಗಳು. ಈ ಯಶಸ್ಸಿನೊಂದಿಗೆ ಭಾರತಕ್ಕಾಗಿ ಶೂಟಿಂಗ್‌ನಲ್ಲಿ ಪದಕ ಗೆದ್ದ 1 ನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಂಬಲಾಗದ ಸಾಧನೆ ಎಂದು ತಿಳಿಸಿದ್ದಾರೆ.
VIDEO | Paris Olympics 2024: PM Modi (@narendramodi) called up shooter Manu Bhaker (@realmanubhaker) to congratulate her after she became the first Indian woman shooter to claim an Olympic medal by snaring a bronze in the 10m air pistol event.#Olympics2024WithPTI… pic.twitter.com/AuOak1sFwB
— Press Trust of India (@PTI_News) July 28, 2024
A historic medal!
Well done, @realmanubhaker, for winning India’s FIRST medal at #ParisOlympics2024! Congrats for the Bronze. This success is even more special as she becomes the 1st woman to win a medal in shooting for India.
An incredible achievement!#Cheer4Bharat
— Narendra Modi (@narendramodi) July 28, 2024