ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ದಾಖಲೆ ಬರೆದ ಭಾರತ ಹಾಕಿ ತಂಡ: ಸೆಮಿಫೈನಲ್ ಗೆ ಎಂಟ್ರಿ

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡ ಐತಿಹಾಸಿಕ ದಾಖಲೆ ಬರೆದಿದೆ. ಒಲಿಂಪಿಕ್ಸ್ ಸೆಮಿಫೈನಲ್ ಪ್ರವೇಶಿಸಿದೆ.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆದ್ದ ಭಾರತ ತಂಡ ಸೆಮಿ ಫೈನಲ್ ಪ್ರವೇಶಿಸಿದೆ. ಗ್ರೇಟ್ ಬ್ರಿಟನ್ ವಿರುದ್ಧ ಭಾರತ ತಂಡ ಜಯಗಳಿಸಿದೆ. ಪೆನಾಲ್ಟಿ ಶೂಟ್ ಔಟ್ ನಲ್ಲಿ 4 -2 ಅಂತರದಿಂದ ಭಾರತಕ್ಕೆ ಜಯ ದೊರೆತಿದೆ. ಹರ್ಮನ್ ಪ್ರೀತ್ ನೇತೃತ್ವದ ಭಾರತ ಹಾಕಿ ತಂಡ ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.

ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ ಆಗಸ್ಟ್ 4 ರಂದು ನಡೆದ ಪುರುಷರ ಹಾಕಿ ಸ್ಪರ್ಧೆಯ ಮೊದಲ ಕ್ವಾರ್ಟರ್‌ಫೈನಲ್‌ನಲ್ಲಿ 10 ಮಂದಿಯ ಭಾರತೀಯ ಹಾಕಿ ತಂಡವು ಗ್ರೇಟ್ ಬ್ರಿಟನ್ ವಿರುದ್ಧ ನಂಬಲಾಗದ ಜಯವನ್ನು ದಾಖಲಿಸಿದೆ. ಭಾರತವು ಸೆನ್ಸೇಷನಲ್ ಶೂಟೌಟ್‌ನಲ್ಲಿ 4-2 ರಿಂದ ಗೆಲುವು ದಾಖಲಿಸುವ ಮೂಲಕ ಬ್ರಿಟನ್ ತಂಡವನ್ನು ಸೋಲಿಸಿತು. ನಿಯಮಿತ ಸಮಯದಲ್ಲಿ ಆಟ 1-1 ಸಮಬಲಗೊಂಡಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read