ರಾಜಕೀಯ ನಾಯಕನನ್ನು ಮದುವೆಯಾಗಿದ್ದು ಪರಿಣಿತಿ ಚೋಪ್ರಾಗೆ ದುಬಾರಿ ಆಯ್ತಾ…..?

ಬಾಲಿವುಡ್‌ನ ಬಬ್ಲಿ ನಟಿ ಪರಿಣಿತಿ ಚೋಪ್ರಾ ಇತ್ತೀಚಿನ ದಿನಗಳಲ್ಲಿ ನಟನೆಯ ಜೊತೆಗೆ ಹಾಡಲು ಪ್ರಯತ್ನಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅವರು ಬಾಲಿವುಡ್‌ ಚಿತ್ರಗಳಲ್ಲಿ ಗಾಯಕಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇತ್ತೀಚಿಗೆ ಪರಿಣಿತಿ ನಟಿ ಲೈವ್ ಕನ್ಸರ್ಟ್‌ನಲ್ಲಿ ಹಾಡುಗಳನ್ನು ಹಾಡಿದ್ದಾರೆ. ಕೆಲವೇ ದಿನಗಳ ಹಿಂದೆ ಮದುವೆ ಆಗಿರುವ ಪರಿಣಿತಿ ಚೋಪ್ರಾ, ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಅನೇಕ ಆಸಕ್ತಿದಾಯಕ ವಿಷ್ಯವನ್ನು ಬಹಿರಂಗಪಡಿಸಿದ್ದಾರೆ. ಮದುವೆ ಅವರ ವೃತ್ತಿ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ಕೂಡ ಹೇಳಿದ್ದಾರೆ.

ಮದುವೆ ಆದ್ಮೇಲೆ ನಮ್ಮನ್ನು ನಾವು ನಿಧಾನಗೊಳಿಸಬೇಕಾಗಿಲ್ಲ. ಒಬ್ಬೊಬ್ಬರ ಜೀವನ ಒಂದೊಂದು ರೀತಿ ಇರುತ್ತದೆ. ಪ್ರತಿಯೊಬ್ಬರೂ ಅವರದ್ದೇ ಜೀವನ, ಸಂಬಂಧ ಹೊಂದಿರುತ್ತಾರೆ. ಮದುವೆಯ ದಿನ ಕೂಡ ಕೆಲಸ ಮಾಡುವವರಿದ್ದಾರೆ. ನಾನೊಬ್ಬಳು ನಟಿ. ಮದುವೆ ಆದ್ಮೇಲೆ ನಾನು ನಿಧಾನವಾಗಬೇಕೆಂದೇನಿಲ್ಲ. ನಾವಿಬ್ಬರೂ ಬೇರೆ ಬೇರೆ ನಗರದಲ್ಲಿ ವಾಸವಾಗಿದ್ದೇವೆ. ನನ್ನದು ನಟನೆಯಾದ್ರೆ ಅವರದ್ದು ರಾಜಕೀಯ. ನನ್ನ ಮದುವೆ ನನ್ನ ಕೆಲಸದ ಮೇಲೆ ಪರಿಣಾಮ ಬೀರಿಲ್ಲ ಎಂದು ಪರಿಣಿತಿ ಹೇಳಿದ್ದಾರೆ.

ಮದುವೆ ಆದ್ಮೇಲೂ ನಟನೆ ಮುಂದುವರೆಸುತ್ತೇನೆ ಎಂದಿರುವ ನಟಿ, ನಟನೆ ಜೊತೆ ಹಾಡಿಗೂ ಆದ್ಯತೆ ನೀಡೋದಾಗಿ ಹೇಳಿದ್ದಾರೆ. ಎರಡನ್ನೂ ನಾನು ಪ್ರೀತಿ ಮಾಡುತ್ತೇನೆ. ನಟನೆಯಾಗಿ ನೆಲೆಯೂರುವ ಪ್ರಯತ್ನದಲ್ಲಿದ್ದೇನೆ. ನನ್ನ ಹಾಡನ್ನು ಜನರು ಇಷ್ಟಪಡ್ತಾರೆ ಎಂಬ ನಂಬಿಕೆ ನನಗಿದೆ ಎಂದು ಪರಿಣಿತಿ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read