ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಎಲ್ಲಾ ಪೋಷಕರಿಗೆ ಸೂಚನೆ ನೀಡಿದೆ. ಮಗುವಿಗೆ 5 ವರ್ಷ ದಾಟಿದ ನಂತರ ಅವರ ಕಡ್ಡಾಯ ಬಯೋಮೆಟ್ರಿಕ್ ನವೀಕರಣ (MBU)ವನ್ನು ಪೂರ್ಣಗೊಳಿಸಲು ಸೂಚನೆ ನೀಡಿದೆ.
ಕಡ್ಡಾಯ ಬಯೋಮೆಟ್ರಿಕ್ ನವೀಕರಣ (MBU) ಎಂದರೇನು?
ಮಗುವನ್ನು ಆಧಾರ್ಗಾಗಿ ಮೊದಲು ದಾಖಲಿಸಿದಾಗ, ಸಾಮಾನ್ಯವಾಗಿ 5 ವರ್ಷಕ್ಕಿಂತ ಮೊದಲು, ಫಿಂಗರ್ಪ್ರಿಂಟ್ಗಳು, ಐರಿಸ್ ಸ್ಕ್ಯಾನ್ಗಳು ಮತ್ತು ಮುಖದ ಛಾಯಾಚಿತ್ರಗಳಂತಹ ಬಯೋಮೆಟ್ರಿಕ್ ಡೇಟಾವನ್ನು ಸಂಗ್ರಹಿಸಲಾಗುವುದಿಲ್ಲ. ಏಕೆಂದರೆ ಮಕ್ಕಳು ಇನ್ನೂ ಬೆಳೆದಿರುವುದಿಲ್ಲ., ಮಗು 5 ವರ್ಷವನ್ನು ತಲುಪಿದ ನಂತರ, ಬಯೋಮೆಟ್ರಿಕ್ ನವೀಕರಣ ಕಡ್ಡಾಯವಾಗುತ್ತದೆ. ನಂತರ ಮಗುವಿನ ಫಿಂಗರ್ಪ್ರಿಂಟ್, ಐರಿಸ್ ಸ್ಕ್ಯಾನ್ ಮತ್ತು ಹೊಸ ಛಾಯಾಚಿತ್ರವನ್ನು ಸೆರೆಹಿಡಿಯಲಾಗುತ್ತದೆ.
ಶಾಲಾ ಪ್ರವೇಶ ವಿದ್ಯಾರ್ಥಿವೇತನಗಳಿಗೆ ಅರ್ಜಿ ಸಲ್ಲಿಸುವುದು ಪ್ರವೇಶ ಪರೀಕ್ಷೆಗಳಿಗೆ ನೋಂದಣಿ ಸರ್ಕಾರಿ ಸೌಲಭ್ಯಗಳು ಮತ್ತು ಡಿಬಿಟಿ ಯೋಜನೆಗಳನ್ನು ಪಡೆಯಲು ಆಧಾರ್ ಅಗತ್ಯವಾಗಿದೆ.
ಬಯೋಮೆಟ್ರಿಕ್ ನವೀಕರಣದ ವೆಚ್ಚ ಎಷ್ಟು?
5 ರಿಂದ 7 ವರ್ಷದೊಳಗಿನವರ ನಡುವೆ ಮಾಡಿದರೆ ಉಚಿತ
7 ವರ್ಷಗಳ ನಂತರ ಮಾಡಿದರೆ ₹100
ಆಧಾರ್ ಬಯೋಮೆಟ್ರಿಕ್ಸ್ ಅನ್ನು ಎಲ್ಲಿ ಅಪ್ ಡೇಟ್ ಮಾಡಬೇಕು?
ಯಾವುದೇ ಆಧಾರ್ ಸೇವಾ ಕೇಂದ್ರ ಅಥವಾ ಗೊತ್ತುಪಡಿಸಿದ ಆಧಾರ್ ದಾಖಲಾತಿ ಕೇಂದ್ರದಲ್ಲಿ ಅಪ್ ಡೇಟ್ ಪೂರ್ಣಗೊಳಿಸಬಹುದು. ನಿಮ್ಮ ಮಗುವಿನ ಆಧಾರ್ ಕಾರ್ಡ್ ಮತ್ತು ನಿಮ್ಮ ಗುರುತಿನ ಪುರಾವೆಯೊಂದಿಗೆ ಅದನ್ನು ತನ್ನಿ.