ಡಿಜಿಟಲ್ ಡೆಸ್ಕ್ : ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮಗುವೊಂದು ಅಪಾಯದಲ್ಲಿ ಸಿಲುಕಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಮಗು ಅಪಾರ್ಟ್ ಮೆಂಟ್ ನ 3 ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ್ದು, ಸ್ಥಳಕ್ಕಾಮಿಸಿದ ಅಗ್ನಿಶಾಮಕ ಸಿಬ್ಬಂದಿ ರೋಚಕ ಕಾರ್ಯಾಚರಣೆ ನಡೆಸಿ ಮಗುವನ್ನು ಕಾಪಾಡಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದೆ. ತಾಯಿ ತನ್ನ ಮಗಳು ಭಾವಿಕಾಳನ್ನು ಶಾಲೆಗೆ ಕಳುಹಿಸಲು ಶಾಲೆಗೆ ಹೋಗುತ್ತಿದ್ದರು. ಈ ವೇಳೆ ಮನೆಯಲ್ಲಿದ್ದ ಮಗು ತಮ್ಮ ರೂಮಿನ ಕಿಟಕಿ ಸರಳಿನ ಮೂಲಕ ನುಸುಳಿ ಹೊರಗೆ ಬಂದಿದೆ. ಇದನ್ನು ನೋಡಿದ ಅಕ್ಕಪಕ್ಕದ ಮನೆಯವರು ಜೋರಾಗಿ ಕೂಗಿಕೊಂಡಿದ್ದಾರೆ.
ಪುಣ್ಯಕ್ಕೆ ಅದೇ ಕಟ್ಟಡದಲ್ಲಿ ವಾಸವಾಗಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಜೀವ ಉಳಿಸಿದ್ದಾರೆ. ತಾಯಿ ಮನೆಗೆ ಬೀಗ ಹಾಕಿ ಮಗುವನ್ನ ರೂಮಿನೊಳಗೆ ಬಿಟ್ಟು ಹೋಗಿದ್ದರು ಎನ್ನಲಾಗಿದೆ.
पुण्यात चार वर्षाच्या लहान मुलीला घरात बंद करुन जाणं जिवावर बेतलं असतं. अग्निशमन दलातील जवानाच्या समयसुचकतेमुळे मुलीचे प्राण वाचले आहेत. #Pune #video pic.twitter.com/VKJoRqaXz0
— Ankita Shantinath Khane (@KhaneAnkita) July 8, 2025