ದಾವಣಗೆರೆ: ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ನಿಬಗೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಮನೆಯ ಹಿಂಭಾಗದ ಬಚ್ಚಲ ಕೋಣೆಯಲ್ಲಿ ನೀರು ತುಂಬಿದ ಪಾತ್ರೆಗೆ ಬಿದ್ದು ಎರಡು ವರ್ಷದ ಮಗು ಮೃತಪಟ್ಟಿದೆ.
ರಾಜೇಶ್ವರಿ, ಮಂಜುನಾಥ್ ದಂಪತಿಯ ಮೂರನೇ ಮಗು ವೇದಾ(2) ಮೃತಪಟ್ಟ ಹೆಣ್ಣು ಮಗು. ರಾಜೇಶ್ವರಿ, ಮಂಜುನಾಥ್ ಅವರಿಗೆ ಮೂವರು ಮಕ್ಕಳಿದ್ದು, ದಂಪತಿ ಮನೆ ಸ್ವಚ್ಛಗೊಳಿಸುವ ಉದ್ದೇಶದಿಂದ ಮಕ್ಕಳನ್ನು ಮನೆಯ ಮುಂದೆ ಆಟವಾಡಲು ಬಿಟ್ಟಿದ್ದರು. ಆಟವಾಡುತ್ತಿದ್ದ ವೇದಾ ಮನೆಯ ಪಕ್ಕದ ಖಾಲಿ ಜಾಗದ ಮೂಲಕ ಹಿಂಬದಿಗೆ ಹಿತ್ತಲಿಗೆ ಹೋಗಿದ್ದಾಳೆ. ಪಾತ್ರೆಯಲ್ಲಿದ್ದ ನೀರಿನಲ್ಲಿ ಆಟವಾಡುತ್ತಾ ತಲೆ ಕೆಳಗಾಗಿ ಬಿದ್ದು ಮೃತಪಟ್ಟಿದ್ದಾಳೆ ಎನ್ನಲಾಗಿದೆ.
