ಹಾವೇರಿ : ಜೋಕಾಲಿಯಿಂದ ಉಸಿರುಗಟ್ಟಿ ಬಾಲಕ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ಕೋನಬೇವು ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನ ಕೋನಬೇವಿ ಗ್ರಾಮದ ರಾಹುಲ್ ಬಾವಿಹಳ್ಳಿ ಎಂದು ಗುರುತಿಸಲಾಗಿದೆ. ಈತ ವಿಜಯನಗರ ಜಿಲ್ಲೆ ಹರಪನಹಳ್ಳಿಯ ತೆಲಗಿ ನಿವಾಸಿ . ಕೋನಬೇವು ಗ್ರಾಮದ ಅಜ್ಜಿ ಮನೆಗೆ ರಾಹುಲ್ ಬಂದಿದ್ದಾಗ ಈ ದುರ್ಘಟನೆ ನಡೆದಿದೆ. ಸೀರೆಕಟ್ಟಿ ಜೋಕಾಲಿ ಆಟವಾಡುವ ಅದು ಉರುಳಾಗಿ ಕುತ್ತಿಗೆಗೆ ಸಿಲುಕಿದೆ ಎನ್ನಲಾಗಿದೆ. ಮಕ್ಕಳಿಗೆ ಜೋಕಾಲಿ ಕಟ್ಟಿ ಕೊಡುವ ಪೋಷಕರು ಎಚ್ಚರಿಕೆ ವಹಿಸಬೇಕು.