BIG NEWS : ಪೋಷಕರೇ ಎಚ್ಚರ : ಅಪ್ರಾಪ್ತರಿಗೆ ವಾಹನ ಕೊಟ್ರೆ 25,000 ರೂ. ದಂಡ, 3 ವರ್ಷ ಜೈಲು ಶಿಕ್ಷೆ

ಪೋಷಕರೇ ಎಚ್ಚರ..ನೀವು ಅಪ್ರಾಪ್ತರಿಗೆ ವಾಹನ ಕೊಡುತ್ತೀರಾ.. ಅಪ್ಪಿ ತಪ್ಪಿ ಕೊಟ್ಟರೆ 25,000 ರೂ. ದಂಡ ಬೀಳಲಿದೆ. ಹಾಗೂ 3 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾದೀತು..ಜೋಕೆ..!ಹೌದು. ಅಪ್ರಾಪ್ತರ ಕೈಗೆ ಬೈಕ್ ವಾಹನಗಳನ್ನು ಓಡಿಸಲು ಕೊಟ್ಟರೆ ಪೋಷಕರಿಗೆ 25 ಸಾವಿರ ರೂ. ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಈ ಬಗ್ಗೆ ವಿಜಯನಗರ ಜಿಲ್ಲೆ ಪೊಲೀಸ್ ಅಧೀಕ್ಷಕರು ಖಡಕ್ ಆದೇಶ ಹೊರಡಿಸಿದ್ದು, ‘ಚಾಲನಾ ಪರವಾನಿಗೆ ಇಲ್ಲದವರು ಮತ್ತು ಆಪ್ರಾಪ್ತ ವಯಸ್ಸಿನ ಮಕ್ಕಳು ಮೋಟಾರ್ ವಾಹನಗಳನ್ನು ಚಾಲನೆ ಮಾಡುವುದು ಮೋಟಾರ್ ವಾಹನ ಕಾಯ್ದೆ ಆಡಿಯಲ್ಲಿ ಅಪರಾಧವಾಗಿರುತ್ತದೆ. ಹೊಸಪೇಟೆ ನಗರದಲ್ಲಿ ದಿನಾರಿಕೆ 06.10.2023 ರಿಂದ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದ್ದು, ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮೋಟಾರ್ ವಾಹನಗಳನ್ನು ಚಾಲನೆ ಮಾಡಲು ಕೊಟ್ಟಲ್ಲಿ ಅಂತಹ ವಾಹನಗಳನ್ನು ಜಪ್ತು ಮಾಡಿಕೊಂಡು ಪೋಷಕರ ವಿರುದ್ಧ ಕಲಂ 51) ಆಧಾರ 180 ಐ.ಎಂ.ವಿ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. (ರೂ.25,000/- ದಂಡ ಮತ್ತು 3 ವರ್ಷಗಳ ಜೈಲುವಾಸ ಶಿಕ್ಷೆ), ಕಾರಣ ಪೋಷಕರು ಯಾವುದೇ ಕಾರಣಕ್ಕೂ ಆಪ್ತಾಪ್ತ ವಯಸ್ಸಿನ ಮಕ್ಕಳಿಗೆ ವಾಹನವನ್ನು ಚಲಾವಣೆ ಮಾಡಲು ಆವಕಾಶ ನೀಡಕೂಡದೆಂದು ಈ ಮೂಲಕ ಕೋರಲಾಗಿದೆ’ ಎಂದು ಸೂಚನೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read