ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನ ವೀಡಿಯೋ ಲೀಕ್ ಕೇಸ್ ಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ.ವಿಡಿಯೋ ಲೀಕ್ ಮಾಡಿದ ಆರೋಪ ಸದ್ಯ ದರ್ಶನ್ ಆಪ್ತ ನಟ ಧನ್ವೀರ್ ಮೇಲಿದೆ. ಇದೀಗ ಪ್ರಕರಣದ ವಿಚಾರಣೆ ನಡೆಸುವ ವೇಳೆ ಧನ್ವೀರ್ ವಿಜಯಲಕ್ಷ್ಮಿ ಹೆಸರು ಹೇಳಿದ್ದಾರೆ.
ಈ ಮೊದಲು ಪೊಲೀಸರು ಧನ್ವೀರ್ ವಿಚಾರಣೆ ಎದುರಿಸಿದ್ದರು. ಅವರ ಮೊಬೈಲ್ ತಪಾಸಣೆ ನಡೆಸಿ ಕಳುಹಿಸಿಕೊಟ್ಟಿದ್ದರು . ನಂತರ 2 ನೇ ಬಾರಿ ಧನ್ವೀರ್ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದರು. ಈ ವೇಳೆ ಅವರು ಹಲವು ವಿಷಯಗಳನ್ನ ರಿವೀಲ್ ಮಾಡಿದ್ದಾರೆ. ನಾನು ವಿಡಿಯೋ ವೈರಲ್ ಮಾಡಿಲ್ಲ, ನಾನು ವಿಜಯಲಕ್ಷ್ಮಿ ಅವರಿಗೆ ವೀಡಿಯೋ ಫಾರ್ವಡ್ ಮಾಡಿದ್ದೆ ಎಂದು ಧನ್ವೀರ್ ಮಾಹಿತಿ ನೀಡಿದ್ದಾರೆ. ಆದ್ದರಿಂದ ಈ ವಿಷಯವನ್ನು ಪೊಲೀಸರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ವಿಜಯಲಕ್ಷ್ಮಿ ಅವರನ್ನ ಪೊಲೀಸರು ವಿಚಾರಣೆ ಕರೆಸುವ ಸಾಧ್ಯತೆ ಇದೆ.
ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ವಿಡಿಯೋ ವೈರಲ್ ಬೆನ್ನಲ್ಲೇ ನಟ ದರ್ಶನ್ ಆಪ್ತ ಧನ್ವೀರ್ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.ಧನ್ವೀರ್ ಅವರನ್ನು ಕರೆಸಿಕೊಂಡ ಸಿಸಿಬಿ ಪೊಲೀಸರು ಅವರ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು.
ದರ್ಶನ್ ಆಪ್ತ ಧನ್ವೀರ್ ಪರಪ್ಪನ ಅಗ್ರಹಾರದ ಕೈದಿಗಳ ವಿಡಿಯೋ ರಿಲೀಸ್ ಮಾಡಿದ್ರಾ ಎಂಬ ಅನುಮಾನದ ಹಿನ್ನೆಲೆ ಅವರನ್ನು ವಿಚಾರಣೆ ನಡೆಸಿದ್ದಾರೆ. ಆದರೆ ಪರಿಶೀಲನೆ ವೇಳೆ ಮೊಬೈಲ್ ನಲ್ಲಿ ಯಾವುದೇ ಸಾಕ್ಷಿ ಸಿಗಲಿಲ್ಲ. ಈ ಹಿನ್ನೆಲೆ ಅವರನ್ನು ಬಿಟ್ಟು ಕಳುಹಿಸಿರುವ ಸಿಸಿಬಿ ಪೊಲೀಸರು ಮತ್ತೆ ವಿಚಾರಣೆ ಅಗತ್ಯ ಇದ್ದರೆ ಮತ್ತೆ ಬರಬೇಕು ಎಂದು ಹೇಳಿದ್ದರು.
