ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಶಿಕ್ಷೆ ಅನುಭವಿಸುವುದನ್ನು ಬಿಟ್ಟು ಬಿಂದಾಸಾಗಿ ಲೈಫ್ ಲೀಡ್ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಅಪರಾಧಿಗಳಿಗೆ ಮೊಬೈಲ್, ಟಿವಿ ಸೇರಿದಂತೆ ಸಾಕಷ್ಟು ಸೌಲಭ್ಯಗಳನ್ನು ಜೈಲಿನ ಸೆಲ್ ನಲ್ಲಿಯೇ ಕಲ್ಪಿಸಲಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ವಿಕೃತ ಕಾಮಿ, ರೇಪಿಸ್ಟ್ ಉಮೇಶ್ ರೆಡ್ಡಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾರೋಷವಾಗಿ ಬದುಕುತ್ತಿದ್ದಾನೆ. ಜೈಲಿನ ಸೆಲ್ ನಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಾ, ಟಿ ವಿ ನೋಡುತ್ತಾ ಕಾಲ ಕಳೆಯುತ್ತಿದ್ದು, ಜೈಲಿನ ಸೆಲ್ ನ್ನು ಮನೆಯ ರೂಮಿನಂತೆ ಎಲ್ಲಾರೀತಿಯ ಸೌಲಭ್ಯಗಳ ನಡುವೆ ಬಿಂದಾಸ್ ಆಗಿ ಇದ್ದಾನೆ. ಈ ಕುರಿತ ವಿಡಿಯೋ ಸಾಅಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಪರಾಧಿ ಜೈಲಿನಲ್ಲಿ ಇಂತಹ ವ್ಯವಸ್ಥೆಗಳನ್ನು ಕೊಟ್ಟಿದ್ದಾದರೂ ಯಾರು? ಮೊಬೈಲ್ ಬಳಕೆಗೆ ಅವಕಾಶ ಸಿಕ್ಕಿದ್ದು ಹೇಗೆ ಎಂಬದು ತನಿಖೆಯಿಂದಷ್ಟೆ ತಿಳಿದುಬರಬೇಕಿದೆ.
ಇನ್ನು ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಜೈಲು ಸೇರಿರುವ ನಟಿ ರನ್ಯಾ ರಾವ್ ಹಾಗೂ ಆಕೆಯ ಗೆಳೆಯ ತರುಣ್ ಗೂ ಕೂಡ ಜೈಲಿನಲ್ಲಿ ಮೊಬೈಲ್ ನೀಡಲಾಗಿದೆ. ಒಟ್ಟಾರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ, ಅಪರಾಧಿಗಳಿಗೆ ರಾಜಾತಿಥ್ಯ ನೀಡುವ ಮೂಲಕ ಸುಪ್ರೀಂ ಕೋರ್ಟ್ ಆದೇಶವನ್ನು ಕೂಡ ಉಲ್ಲಂಘನೆ ಮಾಡುತ್ತಿರುವುದು ಜಗಜ್ಜಾಹೀರಾಗಿದೆ.
