ತನ್ನ ವಿರುದ್ಧ ಸಾಕ್ಷ್ಯ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ; ಜೈಲಿನಿಂದಲೇ ಕರೆ ಮಾಡಿ ಬೆದರಿಕೆ ಹಾಕಿದ ರೌಡಿಶೀಟರ್

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಮೊಬೈಲ್ ಫೋನ್ ಗಳು ಆಕ್ಟೀವ್ ಆಗಿವೆ ಎನ್ನಲಾಗುತ್ತಿದೆ. ರೌಡಿಶೀಟರ್ ಒಬ್ಬ ಜೈಲಿನಿಂದಲೇ ಮೊಬೈಲ್ ಮೂಲಕ ಕರೆ ಮಾಡಿ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಜೊಸೆಫ್ ಎಂಬಾತನ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ರೌಡಿಶೀಟರ್ ಸೋಮಶೇಖರ್, ಇದೀಗ ಮೊಬೈಲ್ ಇನ್ ಸ್ಟಾಗ್ರಾಂ ಮೂಲಕ ಕರೆ ಮಾಡಿ ವಾಯ್ಸ್ ಮೆಸೇಜ್ ಕಳುಹಿಸಿ ತನ್ನ ವಿರುದ್ಧ ಸಾಕ್ಷ್ಯ ಹೇಳದಂತೆ ಸಾಕ್ಷಿಗೆ ಬೆದರಿಕೆಯೊಡ್ಡುತ್ತಿದ್ದಾನೆ.

ಪತ್ನಿ ಎದುರೇ ಜೋಸೆಫ್ ಬಬ್ಲಿಯನ್ನು ರೌಡಿಶೀಟರ್ ಸೋಮಶೇಖರ್ ಕೊಲೆ ಮಾಡಿದ್ದ. ಕೊಲೆ ಕೇಸ್ ಕೋರ್ಟ್ ನಲ್ಲಿ ಟ್ರಯಲ್ ಹಂತಕ್ಕೆ ಬಂದಿದೆ. ತನ್ನ ವಿರುದ್ಧ ಸಾಕ್ಷ್ಯ ಹೇಳಿದರೆ ನಿನ್ನನ್ನೂ ಕೊಲೆ ಮಾಡುವುದಾಗಿ ಜೋಸೆಫ್ ಪತ್ನಿಗೆ ಸೋಮಶೇಖರ್ ಬೆದರಿಕೆ ಹಾಕಿದ್ದಾನಂತೆ. ರೌಡಿಶೀಟರ್ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read