BIG NEWS: ಪರಪ್ಪನ ಅಗ್ರಹಾರ ಜೈಲಿನ ಮತ್ತೊಂದು ಕರ್ಮಕಾಂಡ ಬಯಲು: ರೌಡಿಗಳ ಹುಟ್ಟುಹಬ್ಬಕ್ಕೆ ಜೈಲಿಗೆ ಬರುತ್ತೆ ಕೇಕ್

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ರಾಜಾತಿಥ್ಯ ನೀಡಲಾಗುತ್ತಿರುವ ಘಟನೆ ಬೆಳಕಿಗೆ ಬಂದಿರುವ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲಿನ ಇನ್ನಷ್ಟು ಕರ್ಮಕಾಂಡಗಳು ಬಯಲಾಗುತ್ತಿವೆ.

ಜೈಲು ಸೇರಿರುವ ರೌಡಿಗಳ ಹುಟ್ಟುಹಬ್ಬಕ್ಕೆ ವಿಧವಿಧ ರೀತಿಯ ಕೇಕ್ ಗಳು ಜೈಲಿಗೆ ಬರುತ್ತವೆ. ಜೈಲಿನಲ್ಲಿಯೇ ಆರೋಪಿಗಳು ರಾಜಾರೋಷವಾಗಿ ಬರ್ಥ್ ಡೇ ಸೆಲೆಬ್ರೇಟ್ ಮಾಡಿ ಸಂಭ್ರಮಿಸುತ್ತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರೌಡಿಗಳ ಹುಟ್ಟುಹಬ್ಬವಿದ್ದರೆ ಅವರಿಗೆ ಬೇಕಾದ ಮಾದರಿಯ ಕೇಕ್ ಗಳು ಜೈಲಿಗೆ ಬಂದು ತಲುಪುತ್ತದೆ. ಜೈಲಿನ ಒಳಗಡೆಯೇ ರೌಡಿ ಕುಳ್ಳ ಸೀನ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಂಡಿದ್ದಾನೆ. ಗನ್ ಮಾದರಿಯ ಕೇಕ್ ಕತ್ತರಿಸಿ ಸಂಭ್ರಮಿಸಿದ್ದು, ಇದಕ್ಕೆ ಕುಖ್ಯಾತ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಸಾಥ್ ನೀಡಿದ್ದಾನೆ. ಹ್ಯಾಪಿ ಬರ್ಥ್ ಡೇ ಶ್ರೀನಿವಾಸ್ ಅಣ್ಣ ಎಂದು ಕೇಕ್ ಮೇಲೆ ಬರೆದು ಶುಭಕೋರಲಾಗಿದೆ.

ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿರುವ ರೌಡಿಗಳು, ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯದಲ್ಲಿ ಕಾಲಕಳೆಯುತ್ತಿದ್ದು, ಜೈಲಿನಲ್ಲಿ ಶಿಕ್ಷೆ ಬದಲಾಗಿ ಇನ್ನಷ್ಟು ಆರಾಮವಾಗಿ ಕಾಲಕಳೆಯುತ್ತ, ಸುರಕ್ಷಿತವಾಗಿ ಎಂಜಾಯ್ ಮಾಡುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read