ಬೆಂಗಳೂರು: ದ್ವೇಷ ಭಾಷಣ ಮಸೂದೆ ಮಂಡನೆಗೆ ಇಂದೇ ಸಚಿವ ಸಂಪುಟದಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಬಿಜೆಪಿ ಟಾರ್ಗೆಟ್ ಮಾಡಲು ಮಸೂದೆ ತರುತ್ತಿಲ್ಲ. ಈಗ ಇರುವ ಕಾಯ್ದೆಯನ್ನೇ ಇನ್ನಷ್ಟು ಬಲಪಡಿಸುವ ತಿದ್ದುಪಡಿ ಮಾಡಲಾಗುವುದು ಎಂದರು.
ಬಿಜೆಪಿ ಟಾರ್ಗೆಟ್ ಎಂಬುದು ಸುಳ್ಲು ಆರೋಪ. ಅಧಿಕಾರದಲ್ಲಿ ನಾವೇ ಶಾಶ್ವತವಗಿ ಇರುತ್ತೇವಾ? ಅವರೂ ಬರುವುದಿಲ್ಲವೇ? ಯಾರೇ ಅಧಿಕಾರಕ್ಕೆ ಬಂದರೂ ಕಾಯ್ದೆ ಅದೇ ಇರುತ್ತದೆ. ಇಲ್ಲಿ ಯಾರನ್ನೂ ಟಾರ್ಗೆಟ್ ಮಾಡುವ ಉದ್ದೇಶವಿಲ್ಲ. ಮಸೂದೆಯಲ್ಲಿ ಕೆಲ ತಿದ್ದುಪಡಿ ಮಡಲಾಗುವುದು ಎಂದರು.
