ಗಮನಿಸಿ: ಪಾನ್ ಕಾರ್ಡ್ ಜೊತೆ ‘ಆಧಾರ್’ ಲಿಂಕ್ ಮಾಡಲು ಇನ್ನು ಒಂದೇ ದಿನ ಬಾಕಿ

ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಲು ನಾಳೆಯೆ ಕೊನೇ ದಿನವಾಗಿದ್ದು, ಆದಾಯ ತೆರಿಗೆ ಇಲಾಖೆ ಮಹತ್ವದ ಮಾಹಿತಿ ನೀಡಿದೆ.

ಮೇ 31 ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡಲು ಕೊನೇ ದಿನವಾಗಿದ್ದು, ನಾಳೆಯೊಳಗೆ ಲಿಂಕ್ ಮಾಡದಿದ್ದಲ್ಲಿ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ ಎಂದು ತಿಳಿಸಿದೆ.

11 ಕೋಟಿಗೂ ಅಧಿಕ ಜನರು ಇನ್ನು ತಮ್ಮ ಪಾನ್ ಕಾರ್ಡ್ ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಿಲ್ಲ. ದೇಶದ ಪ್ರತಿಯೊಬ್ಬರೂ ತಮ್ಮ ಪಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆರಂಭದಲ್ಲಿ ಪ್ಯಾನ್ ಗೆ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡಲು 2023 ರ ಜೂ.30 ರವರೆಗೆ ಗಡುವು ನೀಡಲಾಗಿತ್ತು. ಆಗ ಉಚಿತವಾಗಿಯೇ ಪಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಡಲಾಗುತ್ತಿತ್ತು. ಬಳಿಕ ಪ್ರತಿ ಪಾನ್ ಮತ್ತು ಅಧಾರ್ ಕಾರ್ಡ್ ಲಿಂಕ್ ಗೆ ದಂಡವನ್ನು ವಿಧಿಸಲಾಗುತ್ತಿದ್ದು, ಇದೀಗ ಈ ಅವಧಿ ಕೂಡ ನಾಳೆ ಮುಗಿಯಲಿದ್ದು, ನಾಳೆಯೊಳಗೆ ಪಾನ್ ಹಾಗೂ ಆಧಾರ್ ಲಿಂಕ್ ಮಾಡದಿದ್ದಲ್ಲಿ ಜೂನ್ 1ರಿಂದ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ.

ಪಾನ್ ಕಾರ್ಡ್ ಗೆ ಆಧಾರ್ ನಂಬರ್ ಲಿಂಕ್ ಮಾಡುವ ವಿಧಾನ:

* ಆದಾಯ ತೆರಿಗೆಯ ಇ-ಫೈಲಿಂಗ್ ಪೋರ್ಟಲ್ https://incometaxindiaefiling.gov.in/ ಗೆ ಭೇಟಿ ನೀಡಿ.
* ಕ್ವಿಕ್ ಲಿಂಕ್ಸ್ ಅಡಿಯಲ್ಲಿ ಇರುವ ಲಿಂಕ್‌ ಆಧಾರ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ಪಾನ್ ಮತ್ತು ಆಧಾರ್‌ ಕಾರ್ಡ್ ಮೇಲಿರುವ ಸಂಖ್ಯೆಗಳನ್ನು ನಮೂದಿಸಿ.
* ನಂತರ ಕಾಣಿಸುವ ಪೇಜ್‌ ನಲ್ಲಿ ನಿಮ್ಮ ಪಾನ್ ಸಂಖ್ಯೆ ನಮೂದಿಸಿ, ಅದನ್ನು ಖಚಿತಪಡಿಸಿಕೊಂಡು ನಿಮ್ಮ ಮೊಬೈಲ್ ನಂಬರ್ ನಮೂದಿಸಿ.
* ನಿಮ್ಮ ಮೊಬೈಲ್ ಗೆ ಬರುವ ಒಟಿಪಿ ನಮೂದಿಸಿ.
* ಮೊಬೈಲ್‌ ಗೆ ಬಂದ ಒಟಿಪಿ ಪರಿಶೀಲನೆ ಬಳಿಕ ತೋರಿಸುವ ಇ-ಪೇ ಟ್ಯಾಕ್ಸ್‌ ಪೇಜ್‌ ಪುಟ ತೆರೆದುಕೊಳ್ಳುತ್ತದೆ.
* ಬಳಿಕ ಇನ್‌ ಕಂ ಟ್ಯಾಕ್ಸ್‌ ಪೇಜ್‌ ನ ಮೇಲಿರುವ ಪ್ರೊಸೀಡ್‌ ಆಪ್ಷನ್ ಮೇಲೆ ಕ್ಲಿಕ್‌ ಮಾಡಿ.
* ಅಲ್ಲಿ ಪಾವತಿಸಬೇಕಿರುವ ಹಣದ ಮೊತ್ತವನ್ನು ಪಾವತಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read