BIG NEWS: ಪ್ಯಾನ್, ಆಧಾರ್ ಕಾರ್ಡ್ ಜೋಡಣೆ ಗಡುವು 3 ತಿಂಗಳು ವಿಸ್ತರಣೆ: ಜೂ. 30 ರವರೆಗೆ ಅವಕಾಶ

ನವದೆಹಲಿ: ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಜೋಡಣೆ ಅವಧಿಯನ್ನು 3 ತಿಂಗಳು ಜೂನ್ 30 ರ ವರೆಗೆ ವಿಸ್ತರಿಸಲಾಗಿದೆ.

ತೆರಿಗೆದಾರರಿಗೆ ಹೆಚ್ಚಿನ ಸಮಯವನ್ನು ನೀಡಲು, ಶಾಶ್ವತ ಖಾತೆ ಸಂಖ್ಯೆ(PAN) ಮತ್ತು ಆಧಾರ್ ಅನ್ನು ಲಿಂಕ್ ಮಾಡುವ ಗಡುವನ್ನು ಕೇಂದ್ರವು ಮೂರು ತಿಂಗಳವರೆಗೆ ಜೂನ್ 30 ಕ್ಕೆ ವಿಸ್ತರಿಸಿದೆ. ಈ ಹಿಂದೆ, ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯು ಜನರು ತಮ್ಮ ಆಧಾರ್ ಕಾರ್ಡ್ ಅನ್ನು ತಮ್ಮ ಪ್ಯಾನ್‌ಗೆ ಲಿಂಕ್ ಮಾಡಬೇಕೆಂದು ಅಧಿಸೂಚನೆಯನ್ನು ಹೊರಡಿಸಿತು. ಆನ್‌ಲೈನ್‌ನಲ್ಲಿ 1000 ರೂ. ಪಾವತಿಸಿ ಮಾರ್ಚ್ 31 ರೊಳಗೆ ಲಿಂಕ್ ಮಾಡಬೇಕಿದ್ದು, ಇಲ್ಲವಾದರೆ PAN ನಿಷ್ಕ್ರಿಯಗೊಳ್ಳುತ್ತದೆ ಎಂದು ಹೇಳಲಾಗಿತ್ತು. ಅದನ್ನು ಜೂನ್ 30 ರವರೆಗೆ ವಿಸ್ತರಿಸಲಾಗಿದೆ.

ಆದಾಯ-ತೆರಿಗೆ ಕಾಯಿದೆ, 1961 (‘ಆಕ್ಟ್’) ನಿಬಂಧನೆಗಳ ಅಡಿಯಲ್ಲಿ, 1 ನೇ ಜುಲೈ, 2017 ರಂತೆ PAN ಅನ್ನು ನಿಗದಿಪಡಿಸಿದ ಮತ್ತು ಆಧಾರ್ ಸಂಖ್ಯೆಯನ್ನು ಪಡೆಯಲು ಅರ್ಹರಾಗಿರುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಆಧಾರ್ ಅನ್ನು ನಿಗದಿತ ಪ್ರಾಧಿಕಾರಕ್ಕೆ ತಿಳಿಸುವ ಅಗತ್ಯವಿದೆ. ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡುವ ಉದ್ದೇಶಕ್ಕಾಗಿ ನಿಗದಿತ ಪ್ರಾಧಿಕಾರಕ್ಕೆ ಆಧಾರ್ ಅನ್ನು ತಿಳಿಸುವ ದಿನಾಂಕ ಈಗ 2023 ರ ಜೂನ್ 30 ರವರೆಗೆ ವಿಸ್ತರಿಸಲಾಗಿದೆ ಹೇಳಲಾಗಿದೆ.

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಶಾಶ್ವತ ಖಾತೆ ಸಂಖ್ಯೆ (PAN) ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಕೊನೆಯ ದಿನಾಂಕವನ್ನು ಜೂನ್ 30, 2023 ಕ್ಕೆ ವಿಸ್ತರಿಸಿದೆ. ಮಾರ್ಚ್ 28, 2023 ರಂದು ಬಿಡುಗಡೆಯಾದ ಪತ್ರಿಕಾ ಪ್ರಕಟಣೆಯಲ್ಲಿ CBDT ಹೇಳಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read