SHOCKING: ಪ್ರೀತಿಗೆ ಒಪ್ಪದ ವಿದ್ಯಾರ್ಥಿನಿಗೆ ಕುಡುಗೋಲಿನಿಂದ ಹೊಡೆದು ಕೊಂದ ಕಿರಾತಕ

ಪಾಲ್ಘರ್: ಪಾಲ್ಘರ್ ಜಿಲ್ಲೆಯ ಮೊಖಾಡದಲ್ಲಿ 18 ವರ್ಷದ ಜೂನಿಯರ್ ಕಾಲೇಜು ಯುವತಿಯನ್ನು 22ರ ಹರೆಯದ ಯುವಕನೊಬ್ಬ ಕುಡುಗೋಲಿನಿಂದ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ. ಘಟನೆಯಲ್ಲಿ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಆರೋಪಿತ ಅರ್ಚನಾ ಲಕ್ಷ್ಮಣ್ ಉದಾರ್ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಅವರ ಕುಟುಂಬವು ಅರ್ಚನಾ ಅವರ ಕುಟುಂಬವನ್ನು ಮದುವೆಯ ಪ್ರಸ್ತಾಪದೊಂದಿಗೆ ಸಂಪರ್ಕಿಸಿದ್ದರು, ಅದನ್ನು ಹುಡುಗಿಯ ಮನೆಯವರು ನಿರಾಕರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಶುಕ್ರವಾರ ಮಧ್ಯಾಹ್ನ 12:30ಕ್ಕೆ ಕಾಲೇಜು ವಿದ್ಯಾರ್ಥಿನಿಯ ಕುತ್ತಿಗೆಗೆ ಕುಡುಗೋಲಿನಿಂದ ಹಲ್ಲೆ ನಡೆಸಿ ಅರ್ಚನಾ ಸ್ನೇಹಿತರು ಸಹಾಯಕ್ಕಾಗಿ ಕೂಗಿದ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ.

ಅರ್ಚನಾಳ ಸ್ನೇಹಿತರು ಆಸ್ಪತ್ರೆಗೆ  ಕರೆದೊಯ್ದಿದ್ದು, ಈ ವೇಳೆಗಾಗಲೇ ಮೃತಪಟ್ಟಿದ್ದಾಳೆ. ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರೋಪಿ ಮೊಖಾಡ ಸಮೀಪದ ಕುಗ್ರಾಮವೊಂದರಲ್ಲಿ ವಾಸಿಯಾಗಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read