ಪಾಕಿಸ್ತಾನಿ ಯುವತಿಯೊಬ್ಬಳು ಇತ್ತೀಚೆಗೆ ಭಾರತೀಯ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ದಂಪತಿಗಳು ಸಮಾರಂಭದಲ್ಲಿ ಕೇಕ್ ಕಟ್ ಮಾಡಿದ್ದು ಇದೀಗ ವೈರಲ್ ಆಗಿದೆ. ಈ ಕೇಕ್ನಲ್ಲಿ ಉಭಯ ದೇಶಗಳ ನಡುವೆ ಪ್ರೀತಿ ಮತ್ತು ಶಾಂತಿಯ ಸಂದೇಶವನ್ನು ಸಾರುವ ಸಂದೇಶವನ್ನು ಬರೆಯಲಾಗಿದೆ.
ನಿಶ್ಚಿತಾರ್ಥದ ಕೇಕ್ ಮೇಲಿನ ಸಂದೇಶವು, “#Projec Milaap Begins” ಎಂದು ಬರೆಯಲಾಗಿದೆ. ಕೇಕ್‌ನ ಚಿತ್ರವನ್ನು ವಧುವಿನ ಸಹೋದರಿ ಮಿಶಾಲ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
“ನನ್ನ ಸಹೋದರಿ ತನ್ನ ಭಾರತೀಯ ಗೆಳೆಯನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ಇದು ಎರಡು ದೇಶಗಳ ಸೌಹಾರ್ದತೆಗೆ ನಾಂದಿ ಹಾಡಲಿ. ವಾಘಾ ಗಡಿಯಲ್ಲಿ ಮದುವೆ ಮಾಡುವಂತೆ ಎಲ್ಲರ ಮನವೊಲಿಸಲು ಪ್ರಯತ್ನಿಸುತ್ತಿದ್ದೇನೆ. ಇದು ಸಾಧ್ಯವಾದರೆ ಎರಡೂ ದೇಶಗಳ ನಡುವಿನ ಬಾಂಧವ್ಯ ವೃದ್ಧಿಯಾಗಲಿದೆ’ ಎಂದು ಮಿಶಾಲ್ ಹಂಚಿಕೊಂಡಿದ್ದಾರೆ.
‘ಮೈ ಹೂ ನಾ’ ಚಿತ್ರದಲ್ಲಿನ ಮಿಲಾಪ್ ಯೋಜನೆಯು ಭಾರತ-ಪಾಕ್ ಸಂಬಂಧಗಳನ್ನು ಸುಧಾರಿಸಲು ವಿನ್ಯಾಸಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ʼಮೈ ಹೂ ನಾʼ ಎಂದು ಕೇಕ್ ಮೇಲೆ ಬರೆಸಲಾಗಿದೆ.
https://twitter.com/mishalengelo/status/1627289291695980545?ref_src=twsrc%5Etfw%7Ctwcamp%5Etw