Viral Video | ʼವಕಾ ವಕಾʼ ಹಾಡಿಗೆ ತನ್ನದೇ ಟ್ವಿಸ್ಟ್ ಕೊಟ್ಟ ಮಾವು ಮಾರಾಟಗಾರ….!

2010ರ ಫಿಫಾ ವಿಶ್ವಕಪ್ ವೇಳೆ ಶಕೀರಾ ಹಾಡಿದ್ದ ಜನಪ್ರಿಯ ಹಾಡು ಇಂದಿಗೂ ಸಹ ಸಂಗೀತಾಭಿಮಾನಿಗಳಿಗೆ ಕೆಲವೊಮ್ಮೆ ಕೇಳಬೇಕು ಎನಿಸುತ್ತದೆ. ಇದೀಗ ಇದೇ ಹಾಡಿನ ಟೋನ್‌ಗೆ ಪಾಕಿಸ್ತಾನದ ಮಾವಿನ ಮಾರಾಟಗಾರನೊಬ್ಬ ತನ್ನದೇ ಸಾಲುಗಳನ್ನು ಸೇರಿಸಿ ಹಾಡುವ ಮೂಲಕ ಅಂತರ್ಜಾಲದಲ್ಲಿ ವೈರಲ್ ಆಗಿದ್ದಾನೆ.

ಅಟ್ಟಾಕ್ ನಗರದ ಮಾರುಕಟ್ಟೆಯೊಂದರಲ್ಲಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡುವ ಈತ, ಗಿರಾಕಿಗಳನ್ನು ಸೆಳೆಯಲು ʼವಕಾ ವಕಾʼ ಹಾಡಿನ ಸಾಲುಗಳಿಗೆ ತನ್ನದೇ ಟ್ವಿಸ್ಟ್ ಕೊಟ್ಟು ಹಾಡುತ್ತಿರುವ ವಿಡಿಯೋವನ್ನು ಸ್ಥಳೀಯರೊಬ್ಬರು ರೆಕಾರ್ಡ್ ಮಾಡಿ ಶೇರ್‌ ಮಾಡಿದ್ದಾರೆ.

ಈ ವಿಡಿಯೋ ತುಣುಕು ಅದಾಗಲೇ 40 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದ್ದು, ನೆಟ್ಟಿಗರು ಈತನನ್ನು ’ಪಾಕಿಸ್ತಾನಿ ಶಕೀರಾ’ ಎಂದು ಕರೆಯುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read