ಸಮನ್ ಹಯಾತ್ ಸೋಮ್ರೋ ಹೆಸರಿನ ಪಾಕಿಸ್ತಾನಿ ಇನ್‌ಫ್ಲುಯೆನ್ಸರ್ ಒಬ್ಬರು ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂಗಳಲ್ಲಿ ಭಯಂಕರವಾಗಿ ರೋಸ್ಟ್ ಆಗುತ್ತಿದ್ದಾರೆ.
ಕೇವಲ ಬೆಡ್ ಶೀಟ್‌ಗಳನ್ನು ಬದಲಿಸಿದ್ದನ್ನೇ ದೊಡ್ಡ ಸಾಧನೆಯೆಂಬಂತೆ ಆಚರಿಸುತ್ತಿರುವ ಈಕೆ ಸದ್ಯ ಯುಎಇನಲ್ಲಿ ವಾಸಿಸುತ್ತಿದ್ದು, ಇನ್‌ಸ್ಟಾಗ್ರಾಂನಲ್ಲಿ ಜನಪ್ರಿಯ ಟ್ರಾವೆಲ್ ವ್ಲಾಗರ್ ಆಗಿದ್ದಾರೆ.
“ಶೀಟ್‌ಗಳು ಹಾಗೂ ಎಲ್ಲವನ್ನೂ ಇದೇ ಮೊದಲ ಬಾರಿಗೆ ನಾನೇ ಖುದ್ದು ಬದಲಿಸಿದೆ. ನಿಜ ಹೇಳಬೇಕೆಂದರೆ ಈ ಕೆಲಸ ಅಂದುಕೊಂಡಷ್ಟು ಕಷ್ಟವಲ್ಲ. ನಮಗೆ ಮನೆಯಲ್ಲಿ ಕೆಲಸಗಾರರಿರುವ ಕಾರಣ ನಾವು ಸೋಂಬೇರಿಗಳಾಗಿ ಬಿಡುತ್ತೇವೆ. ನಾನು ಬಹಳ ದೊಡ್ಡ ಕೆಲಸ ಮಾಡಿದೆ ಎನಿಸುತ್ತದೆ, ಹೀಗಾಗಿ ನಾನು ಈ ಸಾಧನೆಯನ್ನು ಸಂಭ್ರಮಿಸುತ್ತೇನೆ! ಏಕೆ ಮಾಡಬಾರದು,” ಎಂದು ಈಕೆ ತನ್ನ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಈಕೆಯ ಈ ಪೋಸ್ಟ್ ಭಾರೀ ವ್ಯಂಗ್ಯಕ್ಕೆ ಕಾರಣವಾಗಿದೆ.
“ಉಳ್ಳವರು ಹಾಗೂ ಅವರ ಸಾಧನೆಗಳು ಸದಾ ಸ್ಪೂರ್ತಿಯುತವಾದಂಥವು,” ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. “ಈ ಉಳ್ಳವರು ತಮ್ಮದೇ ಜಗತ್ತಿನಲ್ಲಿ ಕಳೆದು ಹೋಗಿದ್ದಾರೆ” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
“ನಿಮಗೆ ಮನೆಗೆಲಸದವರಿದ್ದರೂ ಸಹ ನೀವು ನಿಮ್ಮ ಮನೆಯಲ್ಲಿ ಏನೂ ಕೆಲಸ ಮಾಡಿಲ್ಲ, ಒಮ್ಮೆಯೂ, ದೇವರೇ,” ಎಂದು ಮತ್ತೊಬ್ಬ ನೆಟ್ಟಿಗರು ಗೇಲಿ ಮಾಡಿದ್ದಾರೆ.
https://twitter.com/ranaslander/status/1640818289210187777?ref_src=twsrc%5Etfw%7Ctwcamp%5Etweetembed%7Ctwterm%5E1640818289210187777%7Ctwgr%5E15ac150f27d010b3ceda1b5a6ee30cae664e21ea%7Ctwcon%5Es1_&ref_url=https%3A%2F%2Fwww.news18.com%2Fbuzz%2Fpakistani-influencer-celebrates-achievement-after-changing-bedsheets-gets-roasted-7419493.html
https://twitter.com/kyascenehaibhai/status/1641236591166332929?ref_src=twsrc%5Etfw%7Ctwcamp%5Etweetembed%7Ctwterm%5
https://twitter.com/abeerayy__19/status/1641037001397874688?ref_src=twsrc%5Etfw%7Ctwcamp%5Etweetembed%7Ctwterm%5E1641037001397874688%7Ctwgr%5E15ac150f27d010b3ceda1b5a6ee30cae664e21ea%7Ctwcon%5Es1_&ref_url=https%3A%2F%2Fwww.news18.com%2Fbuzz%2Fpakistani-influencer-celebrates-achievement-after-changing-bedsheets-gets-roasted-7419493.html