ನೋಯ್ಡಾ: ಪ್ರಿಯತಮನಿಗಾಗಿ ಭಾರತಕ್ಕೆ ಕಾಲಿಟ್ಟ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್, ತನ್ನ ಸಂಗಾತಿ ಸಚಿನ್ ಮೀನಾ ಜೊತೆಗೆ ನೋಯ್ಡಾದಲ್ಲಿ ನೆಲೆಸಿದ್ದಾಳೆ. ಇದೀಗ ಈಕೆ ಮತ್ತೆ ಸುದ್ದಿಯಾಗಿದ್ದಾಳೆ. ನೆರೆಮನೆಯ ನಿವಾಸಿ ಮಿಥಿಲೇಶ್ ಭಾಟಿ ಎಂಬಾತ ತನ್ನ ಸಂಗಾತಿ ಮೇಲೆ ಅವಹೇಳನಕಾರಿ ಪದ ಬಳಸಿದ್ದಕ್ಕೆ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾಳೆ.
ಸಚಿನ್ ವಿರುದ್ಧ ಅವಹೇಳನಕಾರಿ ಮಾತನಾಡಿದ್ದಕ್ಕೆ ಮಿಥಿಲೇಶ್ ಭಾಟಿ ವಿರುದ್ಧ ಮಾನನಷ್ಟ ಮೊಕದ್ದಮೆಯ ಎಚ್ಚರಿಕೆ ನೀಡಲಾಗಿದೆ. ಅಂತಹ ಅವಹೇಳನಕಾರಿ ಹೇಳಿಕೆಗಳನ್ನು ಸಹಿಸಲಾಗುವುದಿಲ್ಲ ಎಂದು ಸೀಮಾ ಕಾನೂನು ಪ್ರತಿನಿಧಿ ತಿಳಿಸಿದ್ದಾರೆ. ನಮ್ಮ ದೇಶದಲ್ಲಿ, ದೈಹಿಕ ಗುಣಲಕ್ಷಣಗಳು ಮತ್ತು ಚರ್ಮದ ಬಣ್ಣವನ್ನು ಆಧರಿಸಿದ ಅವಮಾನಗಳನ್ನು ಕ್ಷಮಿಸಲಾಗುವುದಿಲ್ಲ. ನಾವು ಭಾಟಿ ವಿರುದ್ಧ ಕಾನೂನು ಕ್ರಮವನ್ನು ಅನುಸರಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ವಕೀಲರು ತಿಳಿಸಿದ್ದಾರೆ.
ಆದರೆ, ಮಿಥಿಲೇಶ್ ಭಾಟಿ ತನ್ನ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ. ಆಕೆಯ ಕೋಪವು ಆ ಪದಗಳನ್ನು ಬಳಸಲು ಪ್ರೇರೇಪಿಸಿತು ಎಂದು ಪ್ರತಿಪಾದಿಸಿದ್ದಾನೆ.
ಸದ್ಯ, ಮಿಥಿಲೇಶ್ ಭಾಟಿ ಮಾಡಿರುವ ಟೀಕೆ ಸೀಮಾಳನ್ನು ಮತ್ತೆ ಇಂಟರ್ನೆಟ್ ಸೆನ್ಸೇಷನ್ ಮಾಡಿದೆ. ಇದು ಅಂತರ್ಜಾಲದಲ್ಲಿ ಹಾಸ್ಯಮಯ ಮೇಮ್‌ಗಳನ್ನು ಸೃಷ್ಟಿಸಿದೆ. ಹೆಸರಾಂತ ಸಂಯೋಜಕ ಯಶರಾಜ್ ಮುಖಾಟೆ ಅವರು ಸೀಮಾ ಹೈದರ್ ಮಾಧ್ಯಮದ ಮುಂದೆ ನೀಡಿರುವ ಹೇಳಿಕೆಗೆ ತಮ್ಮ ಸಂಗೀತದ ಸ್ಪರ್ಶವನ್ನು ನೀಡಿದ್ದಾರೆ. ಸೀಮಾಳ ಸಂಭಾಷಣೆಯಿಂದ ರಚಿಸಲಾದ ಟ್ಯೂನ್‌ನೊಂದಿಗೆ ಪ್ರಾರಂಭಿಸಿ, ಅವರು ಗಿಟಾರ್ ಹಿಡಿದುಕೊಂಡು ಹಾಡುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕ್ಯಾ ಹೈ ಸಚಿನ್ ಮೇ ಎಂಬ ಪದದಿಂದ ಹಾಡಿನ ಟ್ಯೂನ್ ಪ್ರಾರಂಭವಾಗುತ್ತದೆ. ಇದು ನೆಟ್ಟಿಗರನ್ನು ರಂಜಿಸಿದೆ.
ಸೀಮಾ ಹೈದರ್ ಯಾರು?
30 ವರ್ಷ ವಯಸ್ಸಿನ ಸೀಮಾ ಹೈದರ್, ಮೂಲತಃ ಪಾಕಿಸ್ತಾನದ ಸಿಂಧ್ ಪ್ರಾಂತ್ಯದವಳು. ಗ್ರೇಟರ್ ನೋಯ್ಡಾದಲ್ಲಿ ತನ್ನ ಪ್ರಿಯತಮ ಸಚಿನ್ ಮೀನಾನೊಂದಿಗೆ ಜೀವನ ಹಂಚಿಕೊಳ್ಳಲು 2023ರ ಮೇ ತಿಂಗಳಲ್ಲಿ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಾಳೆ. ನಾಲ್ಕು ಮಕ್ಕಳ ತಾಯಿಯಾಗಿರುವ ಸೀಮಾ, ಪ್ರಸ್ತುತ ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಗುಲಾಮ್ ಹೈದರ್ ನನ್ನು ಈ ಹಿಂದೆ ವಿವಾಹವಾಗಿದ್ದಳು. ತನ್ನ ನಾಲ್ಕು ಮಕ್ಕಳೊಂದಿಗೆ ಮೇ 13 ರಂದು ಬಸ್‌ನಲ್ಲಿ ನೇಪಾಳದ ಮೂಲಕ ಭಾರತದ ಗಡಿ ಪ್ರವೇಶಿಸಿದ್ದಾಳೆ.
ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿ ವಾಸಿಸುತ್ತಿರುವ ತನ್ನ ಭಾರತೀಯ ಸಂಗಾತಿ ಸಚಿನ್ ಮೀನಾ ಜೊತೆಗಿನ ಪ್ರೀತಿಯಲ್ಲಿ ಬಿದ್ದ ಸೀಮಾ, ಪಾಕಿಸ್ತಾನದಲ್ಲಿ ತನ್ನ ಮನೆ ಮತ್ತು ಪತಿಯನ್ನು ತೊರೆದು ದಿಟ್ಟ ಹೆಜ್ಜೆ ಇಟ್ಟಳು.
ವೀಸಾ ಇಲ್ಲದೆ ನೇಪಾಳದ ಮೂಲಕ ಭಾರತಕ್ಕೆ ಅನಧಿಕೃತ ಪ್ರವೇಶ ಪಡೆದ ಸೀಮಾಳನ್ನು ಜುಲೈ 4 ರಂದು ಬಂಧಿಸಲಾಯಿತು. ತಾನು ಪಾಕಿಸ್ತಾನಕ್ಕೆ ಹಿಂತಿರುಗಲು ಬಯಸುವುದಿಲ್ಲ. ಭಾರತದಲ್ಲಿ ಶಾಶ್ವತವಾಗಿ ಇರಲು ಅಧಿಕಾರಿಗಳಿಂದ ಅನುಮತಿ ಕೇಳಿದ್ದೇನೆ ಎಂದು ಹೇಳಿದ್ದಾಳೆ. ಆಕೆ ತಾನು ಹಿಂದೂ ಧರ್ಮವನ್ನು ಸ್ವೀಕರಿಸಿರುವುದಾಗಿ ಹೇಳಿಕೊಂಡಿದ್ದಾಳೆ.
ಆಗಸ್ಟ್ 13 ರಂದು, ಸೀಮಾ ತನ್ನ ನೋಯ್ಡಾ ನಿವಾಸದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸುತ್ತಾ ವಂದೇ ಮಾತರಂ ಮತ್ತು ಪಾಕಿಸ್ತಾನ್ ಮುರ್ದಾಬಾದ್, ಹಿಂದೂಸ್ತಾನ್ ಜಿಂದಾಬಾದ್ ಘೋಷಣೆಗಳನ್ನು ಕೂಗಿದ್ದಳು.
https://twitter.com/oberoir1/status/1691043799575953409?ref_src=twsrc%5Etfw%7Ctwcamp%5Etweetembed%7Ctwterm%5E1691043799575953409%7Ctwgr%5Efccf2d2aeb4cb33cb4b9b7d257cffaf65da1ab3d%7Ctwcon%5Es1_&ref_url=https%3A%2F%2Fzeenews.india.com%2Findia%2Flappu-sa-sachin-jhingur-sa-ladka-pakistani-bhabhi-seema-haider-to-take-legal-action-against-neighbour-for-insulting-remarks-2649950.html
https://twitter.com/RomanaRaza/status/1681667047367868421?ref_src=twsrc%5Etfw%7Ctwcamp%5Etweetembed%7Ctwterm%5E1681667047367868421%7Ctwgr%5Efccf2d2aeb4cb33cb4b9b7d257cffaf65da1ab3d%7Ctwcon%5Es1_&ref_url=https%3A%2F%2Fzeenews.india.com%2Findia%2Flappu-sa-sachin-jhingur-sa-ladka-pakistani-bhabhi-seema-haider-to-take-legal-action-against-neighbour-for-insulting-remarks-2649950.html