ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಂಧನವು ಪಾಕಿಸ್ತಾನವನ್ನು ಅಶಾಂತಿಯ ಸ್ಥಿತಿಗೆ ದೂಡಿದೆ. ದೇಶಾದ್ಯಂತ ಹೊಸ ರಾಜಕೀಯ ಪ್ರಕ್ಷುಬ್ಧತೆಯನ್ನು ಹುಟ್ಟುಹಾಕಿರುವ ಸಮಯದಲ್ಲಿ ಪಾಕಿಸ್ತಾನಿ ನಟಿ ಮತ್ತು ದೆಹಲಿ ಪೊಲೀಸರ ನಡುವಿನ ವೈರಲ್ ಸಂವಾದವು ನೆಟ್ಟಿಗರು ನಗುವಂತೆ ಮಾಡಿದೆ.
ಪಾಕಿಸ್ತಾನಿ ನಟಿ ತನ್ನ ಟ್ವೀಟ್ ಮೂಲಕ ದೇಶದಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸುತ್ತಾ, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಗುಪ್ತಚರ ಸಂಸ್ಥೆ RAW ವಿರುದ್ಧ ದೂರು ಸಲ್ಲಿಸಲು ಬಯಸುವುದಾಗಿ ತಿಳಿಸಿದ್ದಾರೆ. ಭಾರತದ ಸರ್ವೋಚ್ಚ ನ್ಯಾಯಾಲಯವು ತನಗೆ ನ್ಯಾಯವನ್ನು ನೀಡುತ್ತದೆ ಎಂದು ಆಶಿಸಿದ್ದು ಇದಕ್ಕೆ ದೆಹಲಿ ಪೊಲೀಸರ ಉತ್ತರ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.
ನಟಿ ಸೆಹರ್ ಶಿನ್ವಾರಿ “ದೆಹಲಿ ಪೊಲೀಸರ ಆನ್‌ಲೈನ್ ಲಿಂಕ್ ಯಾರಿಗಾದರೂ ತಿಳಿದಿದೆಯೇ? ನನ್ನ ದೇಶ ಪಾಕಿಸ್ತಾನದಲ್ಲಿ ಅವ್ಯವಸ್ಥೆ ಮತ್ತು ಭಯೋತ್ಪಾದನೆಯನ್ನು ಹರಡುತ್ತಿರುವ ಭಾರತೀಯ ಪ್ರಧಾನಿ ಮತ್ತು ಭಾರತೀಯ ಗುಪ್ತಚರ ಸಂಸ್ಥೆ RAW ವಿರುದ್ಧ ನಾನು ದೂರು ದಾಖಲಿಸಬೇಕಾಗಿದೆ. ಭಾರತೀಯ ನ್ಯಾಯಾಲಯಗಳು ಸ್ವತಂತ್ರವಾಗಿದ್ದರೆ ಭಾರತೀಯ ಸುಪ್ರೀಂ ಕೋರ್ಟ್ ನನಗೆ ನ್ಯಾಯ ಒದಗಿಸಲಿದೆ ಎಂದು ನನಗೆ ಖಾತ್ರಿಯಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ದೆಹಲಿ ಪೊಲೀಸರ ಟ್ವಿಟರ್ ಹ್ಯಾಂಡಲ್ ಪಾಕಿಸ್ತಾನದಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿದಾಗ ನಟಿ ಟ್ವೀಟ್ ಅನ್ನು ಹೇಗೆ ಹಂಚಿಕೊಳ್ಳಲು ಸಾಧ್ಯವಾಯಿತು ಎಂದು ವ್ಯಂಗ್ಯವಾಗಿ ಗೇಲಿ ಮಾಡಿದೆ. ದೆಹಲಿ ಪೊಲೀಸರಿಗೆ ಪಾಕಿಸ್ತಾನದಲ್ಲಿ ಅಧಿಕಾರವಿಲ್ಲ ಎಂದು ಅವರು ಹೇಳಿದ್ದಾರೆ. ಹೀಗಾಗಿ ಅವರು ಆಕೆಯ ದೂರನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದೆಹಲಿ ಪೊಲೀಸರ ಪ್ರತಿಕ್ರಿಯೆಗೆ ನೆಟ್ಟಿಗರು ವಾಹ್ ಇದು ತಕ್ಕ ಉತ್ತರ ಎಂದಿದ್ದಾರೆ.
https://twitter.com/SeharShinwari/status/1655980088964395008?ref_src=twsrc%5Etfw%7Ctwcamp%5Etweetembed%7Ctwterm%5E1655980088964395008%7Ctwgr%5E0f536a32e900e7fab846c32862cae41cb632aeee%7Ctwcon%5Es1_&ref_url=https%3A%2F%2Fwww.firstpost.com%2Findia%2Fpakistani-actress-seeks-to-file-complaint-against-pm-modi-raw-delhi-police-responds-12573722.html