ಭಾರತೀಯ ಉಡುಪು​ ಧರಿಸಿ ನಟಿ ಮದುವೆ: ಪಾಕಿಗಳಿಂದ ಫುಲ್‌ ಟ್ರೋಲ್

ಪಾಕಿಸ್ತಾನಿ ನಟಿ ಉಷ್ನಾ ಶಾ ಇತ್ತೀಚೆಗೆ ಖಾಸಗಿ ಸಮಾರಂಭದಲ್ಲಿ ಗಾಲ್ಫ್ ಆಟಗಾರ ಹಮ್ಜಾ ಅಮೀನ್ ಅವರನ್ನು ವಿವಾಹವಾದರು. ನವದಂಪತಿಗಳ ವಿಡಿಯೋ ಹಾಗೂ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ವಿವಾಹ ಸಮಾರಂಭಕ್ಕಾಗಿ, ನಟಿ ಪಾಕಿಸ್ತಾನಿ ಬ್ರಾಂಡ್ ವಾರ್ದಾ ಸಲೀಮ್ ವಿನ್ಯಾಸಗೊಳಿಸಿದ ಸುಂದರವಾದ ಕೆಂಪು ಲೆಹೆಂಗಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಭಾರತೀಯ ವಧುವಿನಂತೆ ಬಟ್ಟೆ ಧರಿಸಿದ್ದಾಕ್ಕಾಗಿ ಈಕೆ ಈಗ ಟ್ರೋಲ್ ಆಗುತ್ತಿದ್ದಾರೆ. ತನ್ನ ಮದುವೆಯ ಉಡುಪನ್ನು ಟೀಕಿಸಿದ ದ್ವೇಷಿಗಳಿಗೆ ಉಷ್ನಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಅವರು ಖಾರವಾದ ಪ್ರತಿಕ್ರಿಯೆ ಹಾಕಿದ್ದಾರೆ.

ನನ್ನ ಉಡುಪಿನ ಸಮಸ್ಯೆ ಇರುವವರಿಗೆ ಒಂದು ಮಾತು. ನಿಮ್ಮನ್ನು ಮದುವೆಗೆ ಆಹ್ವಾನಿಸಲಾಗಿಲ್ಲ. ನನ್ನ ಆಭರಣಗಳು, ನನ್ನ ಮದುವೆಯ ಸಿದ್ದತೆ ಸಂಪೂರ್ಣವಾಗಿ ಪಾಕಿಸ್ತಾನಿ ಶೈಲಿಯಲ್ಲಿದೆ. ನನ್ನ ಹೃದಯ ಕೂಡ ಎಂದಿರುವ ನಟಿ, ನಮ್ಮ ಮದುವೆಗೆ ಬಂದ ಆಹ್ವಾನಿಸದ ಫೋಟೋಗ್ರಾಫರ್‌ಗಳಿಗೆ ನನ್ನ ಶುಭಾಶಯಗಳು ಎಂದು ತಿರುಗೇಟು ನೀಡಿದ್ದಾರೆ.

ಮದುವೆಯ ದಿನದಂದು ಆಕೆ ಮನಮುಟ್ಟುವಂತೆ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ವೀಡಿಯೊ ಕುರಿತು ಕಾಮೆಂಟ್ ಮಾಡಿದ ಬಳಕೆದಾರರು, “ಪಾಕಿಸ್ತಾನದವರು ತಮ್ಮದೇ ಆದ ಸಂಸ್ಕೃತಿ ಮತ್ತು ಧರ್ಮವನ್ನು ಹೊಂದಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಪಾಕಿಸ್ತಾನಕ್ಕೆ ಆಮದು ಮಾಡಿಕೊಳ್ಳಲು ಪ್ರಯತ್ನಿಸುವುದನ್ನು ನಿಲ್ಲಿಸಿ. ಮತ್ತು ನಮ್ಮ ಧರ್ಮವು ಈ ರೀತಿಯಉಡುಪು ಧರಿಸಲು ನಮಗೆ ಅನುಮತಿಸುವುದಿಲ್ಲ. ನಕಾರಾತ್ಮಕತೆಯನ್ನು ಹರಡುವುದನ್ನು ನಿಲ್ಲಿಸಿ” ಎಂದು ಪ್ರತಿಕ್ರಿಯೆ ಮಾಡುತ್ತಿದ್ದಾರೆ.

1v4jtqgo

https://twitter.com/SyedKazimMehdi9/status/1630032842217455617?ref_src=twsrc%5Etfw%7Ctwcamp%5Etweetembed%7Ctwterm

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read