ಭಾರತದೊಳಗೆ ಉಗ್ರರನ್ನು ನುಸುಳಿಸುವ ಮೂಲಕ ಶಾಂತಿಗೆ ಭಂಗ ತರುವ ನೆರೆ ರಾಷ್ಟ್ರ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್, ಇಲ್ಲಿ ಶಾಂತಿ ಕದಡಿ ಉಗ್ರರು ಪಾಕಿಸ್ತಾನದೊಳಗೆ ಹೋಗಿ ಅಡಗಿ ಕುಳಿತರೂ ಸಹ ಅವರನ್ನು ಬಿಡುವುದಿಲ್ಲ. ನುಗ್ಗಿ ಹೊಡೆಯುತ್ತೇವೆ ಎಂದು ಹೇಳಿದ್ದಾರೆ.
ಸಿಎನ್ಎನ್ ನ್ಯೂಸ್ 18 ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಖಡಕ್ ಎಚ್ಚರಿಕೆ ನೀಡಿದ ರಾಜನಾಥ ಸಿಂಗ್, ಭಾರತದ ನೆಲದಲ್ಲಿ ಉಗ್ರ ಚಟುವಟಿಕೆ ನಡೆಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಅಂತಹ ದುಷ್ಕೃತ್ಯ ಎಸಗುವ ದುಸ್ಸಾಹಸಕ್ಕೆ ಕೈ ಹಾಕಿದರೆ ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದ್ದಾರೆ.
ಬ್ರಿಟನ್ ಮೂಲದ ‘ದಿ ಗಾರ್ಡಿಯನ್’ ಪತ್ರಿಕೆ ತನ್ನ ಇತ್ತೀಚಿನ ವರದಿಯಲ್ಲಿ ಪಾಕಿಸ್ತಾನದಲ್ಲಿ ಕಳೆದ ಎರಡು ವರ್ಷದ ಅವಧಿಯಲ್ಲಿ ನಡೆದ 20 ಉಗ್ರರ ನಿಗೂಢ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಎಂದು ಪ್ರಕಟಿಸಿದ್ದರ ಬೆನ್ನಲ್ಲೇ ರಕ್ಷಣಾ ಸಚಿವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
https://twitter.com/Ali_Mustafa/status/1776245234026033175?ref_src=twsrc%5Etfw%7Ctwcamp%5Etweetembed%7Ctwterm%5E1776245234026033175%7Ctwgr%5E7b2d937945837500bd875dc6a41be629ab7f4fc6%7Ctwcon%5Es1_&ref_url=https%3A%2F%2Fwww.freepressjournal.in%2Findia%2Fpakistan-mein-ghus-ke-marenge-defence-minister-rajnath-singhs-fiery-response-to-question-on-cross-border-terrorism-watch