ಪಾಕಿಸ್ತಾನ : ಖೈಬರ್ ಪಖ್ತುಂಖ್ವಾ ಗ್ರಾಮದ ಮೇಲೆ ಪಾಕಿಸ್ತಾನ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಎಂಟು ಬಾಂಬ್ಗಳನ್ನು ಹಾಕಿದ್ದರಿಂದ 30 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಸೋಮವಾರ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಪಾಕಿಸ್ತಾನ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ. ಈ ಘಟನೆ ಬೆಳಗಿನ ಜಾವ 2 ಗಂಟೆ ಸುಮಾರಿಗೆ ನಡೆದಿದ್ದು, ತಿರಾ ಕಣಿವೆಯಲ್ಲಿರುವ ಮಾಟ್ರೆ ದಾರಾ ಗ್ರಾಮದ ಮೇಲೆ ಪಾಕಿಸ್ತಾನದ ಯುದ್ಧ ವಿಮಾನಗಳು ಎಂಟು LS-6 ಬಾಂಬ್ಗಳನ್ನು ಬೀಳಿಸಿ ಭಾರಿ ಹತ್ಯಾಕಾಂಡಕ್ಕೆ ಕಾರಣವಾಯಿತು. ಸತ್ತವರೆಲ್ಲರೂ ನಾಗರಿಕರು. ಸ್ಥಳೀಯ ಮಾಧ್ಯಮಗಳು ಅನೇಕ ಜನರು ಗಾಯಗೊಂಡಿದ್ದಾರೆ ಎಂದು ವರದಿ ಮಾಡಿದೆ, ಆದರೆ ಅವರ ಪರಿಸ್ಥಿತಿ ಇನ್ನೂ ಸ್ಪಷ್ಟವಾಗಿಲ್ಲ.
ವರದಿಗಳ ಪ್ರಕಾರ, ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಪಶ್ತೂನ್ ಬಹುಸಂಖ್ಯಾತ ಮಾಟ್ರೆ ದಾರಾ ಗ್ರಾಮದ ಮೇಲೆ ಜೆಎಫ್ -17 ಫೈಟರ್ ಜೆಟ್‌ಗಳಿಂದ ಎಲ್‌ಎಸ್ -6 ಬಾಂಬ್‌ಗಳನ್ನು ಬೀಳಿಸಲಾಗಿದೆ.
⚡ Over 20 civilians were killed including childrens and many injured in Pakistan Air Force airstrikes on villages in the Tirah Valley of the Khyber Pass region. Pakistan Air Force JF-17 fighter jets dropped at least eight LS-6 bombs on the villages. pic.twitter.com/5A3kMtVwZn
— OSINT Updates (@OsintUpdates) September 22, 2025