Video: ರಾಷ್ಟ್ರಗೀತೆ ಆರಂಭವಾಗುತ್ತಿದ್ದಂತೆ ಕೆಲಸ ನಿಲ್ಲಿಸಿ ಗೌರವ ಸಲ್ಲಿಸಿದ ಪೇಂಟರ್; ಇದು ನಿಜವಾದ ʼದೇಶಭಕ್ತಿʼ ಎಂದ ನೆಟ್ಟಿಗರು

ರಾಷ್ಟ್ರಗೀತೆ ಆರಂಭವಾಗುತ್ತಿದ್ದಂತೆ ಮನೆಯೊಂದಕ್ಕೆ ಬಣ್ಣ ಬಳಿಯುತ್ತಿದ್ದ ಪೇಂಟರ್‌, ತನ್ನ ಕೆಲಸ ನಿಲ್ಲಿಸಿ ಅಚಲ ಗೌರವವನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಕಿಟಕಿಯ ಅಂಚಿನಲ್ಲಿ ಚಲನರಹಿತವಾಗಿ ನಿಂತಿರುವ ವ್ಯಕ್ತಿಯನ್ನು ದೃಶ್ಯಾವಳಿ ಸೆರೆಹಿಡಿದಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ತುಣುಕಿನಲ್ಲಿ ರಾಷ್ಟ್ರಗೀತೆ ಆರಂಭವಾದಾಗ ಆ ವ್ಯಕ್ತಿ ನಿಶ್ಚಲವಾಗಿ ನಿಂತಿರುವುದು ಕಂಡು ಬರುತ್ತದೆ, ಆದರೆ ಕೆಲವು ವಿದ್ಯಾರ್ಥಿಗಳು ಇದೇ ಸಂದರ್ಭದಲ್ಲಿ ತಮ್ಮ ಎಂದಿನ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

“ಅವನು ನಿಜವಾದ ಭಾರತೀಯ” ಎಂದು ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. “ಶಿಕ್ಷಣವು ಪುಸ್ತಕಗಳಲ್ಲಿ ಮಾತ್ರ ಕಂಡುಬರುವುದಿಲ್ಲ” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ಮೂರನೆಯವನು, “ಈ ಮನುಷ್ಯನಿಗೆ ನಾನು ಗೌರವ ಸಲ್ಲಿಸುತ್ತೇನೆ” ಎಂದು ಹೇಳಿದ್ದಾರೆ. ನಾಲ್ಕನೆಯವರು, “ಅವರು ನಿಜವಾದ ಸುಶಿಕ್ಷಿತರು” ಎಂದು ಪ್ರತಿಕ್ರಿಯಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read