ತಿರುವನಂತಪುರಂ: ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಜಿಮ್ ನಲ್ಲಿ ಕಸರತ್ತು ನಡೆಸುವ ವೇಳೆ ವ್ಯಾಯಾಮ ಮಾಡುವ ಉಪಕರಣ ಟ್ರೆಡ್ ಮಿಲ್ ನಲ್ಲಿ ಬಿದ್ದು ಹಣೆಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಾಜೀವ್ ಚಂದ್ರಶೇಖರ್, ಟ್ರೆಡ್ ಮಿಲ್ ನಲ್ಲಿ ಎಚ್ಚರಿಕೆಯಿಂದ ಮೊಬೈಲ್ ಬಳಸಿ ಎಂದು ತಿಳಿಸಿದ್ದಾರೆ. ನೀವು ಟ್ರೆಡ್ ಮಿಲ್ ನಲ್ಲಿ ಫೋನ್ ನಲ್ಲಿ ಮಾತಾಡಲು ಪ್ರಯತ್ನಿಸಿದರೆ ಅಥವಾ ಅಜಾಗರೂಕರಾಗಿದ್ದರೆ ಜಾರಿ ಬಿದ್ದು ಮುಖ ಒಡೆದುಕೊಳ್ಳುವ ಅಥವಾ ಗಾಯಗೊಳ್ಳುವ ಸಾಧ್ಯತೆ ಇದೆ. ನನಗೆ ಮುಜುಗರವಾಗುವಂತಹ ನೋವು ಮತ್ತು ಗಾಯದ ಗುರುತುಗಳಾಗಿವೆ ಎಂದು ತಿಳಿಸಿದ್ದಾರೆ.
ಈ ಘಟನೆ ಎಲ್ಲಿ ಸಂಭವಿಸಿತು ಎಂದು ಚಂದ್ರಶೇಖರ್ ಉಲ್ಲೇಖಿಸಿಲ್ಲ. ಆದಾಗ್ಯೂ, ಹಂಚಿಕೊಂಡ ಚಿತ್ರಗಳಲ್ಲಿ ಅವರ ಹಣೆ ಮತ್ತು ಮುಖಕ್ಕೆ ಸಣ್ಣಪುಟ್ಟ ಗಾಯಗಳು ಕಂಡುಬಂದಿವೆ.
So I learnt something today – with pain as a consequence
— Rajeev Chandrasekhar 🇮🇳 (@RajeevRC_X) October 5, 2025
If you are on a treadmill and try and reach out to a ringing phone – and are careless – there are chances you can slip and fall and scrape ur face/injure urself.
Why do i say this wth so much confidence? Because it… pic.twitter.com/3BuYecfUlW