ಪ್ರಯಾಣಿಕರೇ ಗಮನಿಸಿ: KSR ರೈಲು ನಿಲ್ದಾಣದ 3ನೇ ಪ್ರವೇಶ ದ್ವಾರದಲ್ಲಿ ಪೇ & ಪಾರ್ಕಿಂಗ್ ಸೌಲಭ್ಯ

ಕೆಎಸ್‌ಆರ್ ಬೆಂಗಳೂರು ಸಿಟಿ ರೈಲು ನಿಲ್ದಾಣದಲ್ಲಿ ಮೂರನೇ ಎಂಟ್ರಿಯನ್ನು ಪ್ರಾರಂಭಿಸಿದ ಆರು ವರ್ಷಗಳ ನಂತರ, ಸಾರ್ವಜನಿಕರಿಗೆ ಮೊದಲ ‘ಪೇ ಮತ್ತು ಪಾರ್ಕ್’ ಸೌಲಭ್ಯವನ್ನು ಶುಕ್ರವಾರ ಪ್ರಾರಂಭಿಸಲಾಯಿತು. ಜನಸಂದಣಿಯಿಂದ ತುಂಬಿರುವ ಗುಬ್ಬಿ ತೋಟದಪ್ಪ ರಸ್ತೆಯಲ್ಲಿ ಕೆಂಪೇಗೌಡ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣದ ಬಳಿ ಇದೆ.

ನಗರ ಮೂಲದ ಸ್ಮಾರ್ಟ್‌ಲೆನ್ಸ್ ಪಾರ್ಕಿಂಗ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ಗೆ ನವೆಂಬರ್ 29 ರಿಂದ ಮೂರು ವರ್ಷಗಳ ಅವಧಿಗೆ ಪಾರ್ಕಿಂಗ್ ಗುತ್ತಿಗೆಯನ್ನು ನೀಡಲಾಗಿದೆ. 697-ಚದರ ಮೀಟರ್ ಜಾಗದಲ್ಲಿ 180 ದ್ವಿಚಕ್ರ ವಾಹನಗಳು ಮತ್ತು 20 ನಾಲ್ಕು-ಚಕ್ರ ವಾಹನಗಳನ್ನು ಇರಿಸಬಹುದು.

ಬೆಂಗಳೂರು ರೈಲ್ವೆ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ (SDCM) ಕೃಷ್ಣ ಚೈತನ್ಯ ನೀಡಿರುವ ಮಾಹಿತಿ ಪ್ರಕಾರ “ಈ ಪ್ರವೇಶವು ನೇರವಾಗಿ ಪ್ಲಾಟ್‌ಫಾರ್ಮ್ ಒಂದಕ್ಕೆ ಹೋಗುತ್ತದೆ. ಪ್ರಸ್ತುತ, ಪ್ರವೇಶದ ಬಳಕೆಯು ವೇಗವನ್ನು ಪಡೆದುಕೊಂಡಿದ್ದು, ಸರಿಸುಮಾರು 10,000 ಪ್ರಯಾಣಿಕರು ಇದನ್ನು ಪ್ರತಿದಿನ ಬಳಸುತ್ತಾರೆ, ”ಎಂದು ತಿಳಿಸಿದ್ದಾರೆ.

ಇದಲ್ಲದೆ, ಇತ್ತೀಚೆಗೆ ಪ್ಲಾಟ್‌ಫಾರ್ಮ್ ಒಂದರಲ್ಲಿ ಎಸ್ಕಲೇಟರ್ ಅನ್ನು ಪ್ರಾರಂಭಿಸುವುದರೊಂದಿಗೆ, ಸಾರ್ವಜನಿಕರು ಈಗ ಎಲ್ಲಾ ಹತ್ತು ಪ್ಲಾಟ್‌ಫಾರ್ಮ್‌ಗಳನ್ನು ಪ್ರವೇಶಿಸಬಹುದಾಗಿದ್ದು, ಈ ಮೊದಲು, ಅವರು ಪ್ಲಾಟ್‌ಫಾರ್ಮ್‌ಗಳ ನಡುವೆ ಹೋಗಲು ಫುಟ್‌ಓವರ್ ಬ್ರಿಡ್ಜ್ ಅನ್ನು ಮಾತ್ರ ಅವಲಂಬಿಸಬೇಕಾಗಿತ್ತು.

ಉದ್ಘಾಟನೆಗೆ ಮುನ್ನ ರೈಲ್ವೆ ವಿಭಾಗ ಮತ್ತು ಪೊಲೀಸರು ವಿಶಾಲವಾದ ಪಾರ್ಕಿಂಗ್ ಜಾಗದಲ್ಲಿ ಖಾಸಗಿ ಬಸ್‌ ಮತ್ತು ಟ್ಯಾಕ್ಸಿಗಳ ಅನಧಿಕೃತ ಪಾರ್ಕಿಂಗ್ ಕೊನೆಗೊಳಿಸಿದ್ದಾರೆ. ಈ ಹಿಂದೆ ಸುತ್ತಮುತ್ತಲಿನ ಮಕ್ಕಳು ಆಟದ ಮೈದಾನವಾಗಿ ಇದನ್ನು ಬಳಸುತ್ತಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read