ಗ್ರಾಮದಲ್ಲಿ ಇದ್ದಕ್ಕಿದ್ದಂತೆ 12 ಪಾದುಕೆಗಳು, 28 ದಂಡ ಪ್ರತ್ಯಕ್ಷ; ಕಂಗಾಲಾದ ಗ್ರಾಮಸ್ಥರು

ಹಾಸನ: ಗ್ರಾಮದ ಹೊರವಲಯದ ಖಾಲಿ ಜಾಗದಲ್ಲಿ ಇದ್ದಕ್ಕಿದ್ದಂತೆ 12 ಪಾದುಕೆಗಳು, 28 ದಂಡ ಪ್ರತಕ್ಷವಾಗಿದ್ದು, ಈ ವಿಚಿತ್ರವನ್ನು ಕಂಡು ಗ್ರಾಮಸ್ಥರು ಕಂಗಾಲಾಗಿರುವ ಘಟನೆ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಹೊನ್ನಶಟ್ಟಿಯಲ್ಲಿ ನಡೆದಿದೆ.

ಹೊನ್ನಶೆಟ್ಟಿ ಗ್ರಾಮದ ಹೊರವಲಯದ ವಿಶಾಲ ಪ್ರದೇಶದಲ್ಲಿ ನೆಲದ ಮೇಲೆ ಅಲ್ಲಲ್ಲಿ 12 ಪಾದುಕೆಗಳು, 28 ದಂಡಗಳು ಕಂಡು ಬಂದಿವೆ. ಇದು ಯಾರ ಕೃತ್ಯ? ಯಾವ ಕಾರಣಕ್ಕಾಗಿ ಈ ರೀತಿ ವಿಶಾಲ ಪ್ರದೇಶದ ತುಂಬೆಲ್ಲ ಪಾದುಕೆ, ದಂಡಗಳನ್ನು ಇಡಲಾಗಿದೆ ಎಂಬುದು ತಿಳಿದುಬಂದಿಲ್ಲ.

ಪೊಲೀಸರಿಗೆ ವಿಷಯ ಗೊತ್ತಾಗುತ್ತಿದ್ದಂತೆ ಅರಸಿಕೆರೆ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಯಾವುದಾದರೂ ಸ್ವಾಮೀಜಿಗಳ ತಂಡ ಪಾದುಕೆ, ದಂಡಗಳನ್ನು ಬಿಟ್ಟು ಹೋಗಿದೆಯೇ? ಅಥವಾ ಯಾವುದೋ ಪೂಜೆಯ ಉದ್ದೇಶಕ್ಕೆ ಈ ರೀತಿ ಪಾದುಕೆ ದಂಡಗಳನ್ನು ಜೋಡಿಸಿ ಇಡಲಾಗಿದೆಯೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read