ಬೆಂಗಳೂರು : ಜೀ ಕನ್ನಡ ವಾಹಿನಿಯಲ್ಲಿ ಹಲವು ರಿಯಾಲಿಟಿ ಶೋ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಸಿಂಗಿಂಗ್ ಹಾಗೂ ಡ್ಯಾನ್ಸಿಂಗ್ ಶೋಗಳಿಂದ ಹಿಡಿದು ಕಾಮಿಡಿ ಶೋವರೆಗೆ ಎಲ್ಲಾ ರಿಯಾಲಿಟಿ ಶೋಗಳು ಹಿಟ್ ಆಗಿದೆ. ಇದೀಗ ಮತ್ತೊಂದು ಹೊಸ ರಿಯಾಲಿಟಿ ಶೋ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.
ಸದ್ಯ , ವಾಹಿನಿ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಎಂಬ ಹೆಸರಿನ ಪ್ರೋಮೋ ಬಿಡುಗಡೆ ಮಾಡಿದೆ. ಅಕುಲ್ ಬಾಲಾಜಿ ಈ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ. ಸದ್ಯ. ಇದರ ಆಡಿಷನ್ ನಡೆಯುತ್ತಿದೆ. ಹಳ್ಳಿ ಜೀವನ ನಡೆಸೋ ಸಿಟಿ ಹುಡುಗಿಯರನ್ನು ಆಯ್ಕೆ ಮಾಡಿಕೊಳ್ಳಲಿದೆ.
ಈ ಹಿಂದೆ ಬಂದಿದ್ದ ‘ಪ್ಯಾಟೆ ಹುಡ್ಗೀರ ಹಳ್ಳಿ ಲೈಫು’ ಶೋವನ್ನ ಅಕುಲ್ ಬಾಲಾಜಿ ಅವರೇ ನಡೆಸಿಕೊಟ್ಟಿದ್ದರು. ಈ ಶೋ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿತ್ತು. ಹಳ್ಳಿ ಜೀವನ, ಹಳ್ಳಿ ಬದುಕು ಹೇಗಿರುತ್ತದೆ ಎಂಬುದನ್ನು ಸಿಟಿ ಹುಡುಗಿಯರಿಗೆ ಮನದಟ್ಟು ಮಾಡಿಕೊಟ್ಟ ಈ ಶೋ ಬಹಳ ಚೆನ್ನಾಗಿ ಮೂಡಿಬಂದಿತ್ತು.
ಹಳ್ಳಿ ಬದುಕಿನ ಬವಣೆಗಳನ್ನು ತೆರೆ ಮೇಲೆ ತರೋ ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಶೀಘ್ರದಲ್ಲಿ.
ಆಡಿಷನ್ ಇದೇ 19ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. 18ರಿಂದ 28 ವರ್ಷ ವಯಸ್ಸಿನ City Modern ಯುವತಿಯರು ಭಾಗವಹಿಸಬಹುದು!ಎಂದು ಜೀ ಕನ್ನಡ ಪ್ರಕಟಣೆ ಹೊರಡಿಸಿದೆ.