ಸ್ವಪಕ್ಷದ ಮುಖಂಡನಿಂದಲೇ ಶಾಸಕನ ಅಕ್ರಮ ಬಹಿರಂಗ, ಬೆಂಬಲಿಗರ ಹೆಸರಲ್ಲಿ ಭಾರಿ ಬೇನಾಮಿ ಆಸ್ತಿ

ಹೂವಿನಹಡಗಲಿ: ಕಾಂಗ್ರೆಸ್ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ್ ಅವರ ವಿರುದ್ಧ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕೆ.ಸಿ. ಕೊಂಡಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಪಿ.ಟಿ. ಪರಮೇಶ್ವರ ನಾಯ್ಕ್ 22 ಬೆಂಬಲಿಗರ ಹೆಸರಲ್ಲಿ ಕೋಟ್ಯಂತರ ರೂ. ಮೌಲ್ಯದ ಬೇನಾಮಿ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಬಂಗಲೆ, ವಾಣಿಜ್ಯ ಸಂಕೀರ್ಣ ಹೊಂದಿರುವ ಪರಮೇಶ್ವರ ನಾಯ್ಕ್ ಹರಪನಹಳ್ಳಿ, ಹಡಗಲಿ, ಮುಂಡರಗಿ, ದಾವಣಗೆರೆಯಲ್ಲಿ ಬೇನಾಮಿ ಹೆಸರಲ್ಲಿ ಆಸ್ತಿ ಸಂಪಾದಿಸಿದ್ದಾರೆ. ಹರಪನಹಳ್ಳಿಯಲ್ಲಿ ಕ್ರಷರ್ ಮಿಕ್ಸರ್ ಪ್ಲಾಂಟ್ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಮಾಹಿತಿ ಹಕ್ಕು ಕಾರ್ಯಕರ್ತರು ಮತ್ತು ಹರಪನಹಳ್ಳಿಯ ಅವರ ಸಂಬಂಧಿಕರು ಪರಮೇಶ್ವರ ನಾಯ್ಕ್ ಅವರು ಸಂಪಾದಿಸಿದ ಅಕ್ರಮ ಆಸ್ತಿಯ ವಿವರಗಳನ್ನು ತಮಗೆ ಒದಗಿಸಿರುವುದಾಗಿ ಕೆ.ಸಿ. ಕೊಂಡಯ್ಯ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read