ಯಜಮಾನಿಯರೇ ಗಮನಿಸಿ : ಈ 15 ಜಿಲ್ಲೆಗಳಿಗೆ ‘ಗೃಹಲಕ್ಷ್ಮಿ’ 4ನೇ ಕಂತಿನ ಹಣ ಬಿಡುಗಡೆ, ನಿಮ್ಮ ಜಿಲ್ಲೆ ಉಂಟಾ ಚೆಕ್ ಮಾಡ್ಕೊಳ್ಳಿ

ಕಾಂಗ್ರೆಸ್ ಸರ್ಕಾರದ ಐದು ಭರವಸೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ತಿಂಗಳು 2000 ರೂ.ಹಣ ಜಮಾ ಮಾಡಲಾಗುತ್ತಿದೆ. ಆದರೆ ಕೆಲವರ ಖಾತೆಗೆ ಇನ್ನೂ ಕೂಡ ಜಮಾ ಆಗಿಲ್ಲ.

ಇದೀಗ ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣವು ವರ್ಗಾವಣೆಯಾಗುತ್ತಿದ್ದು, ಮೊದಲ ಹಂತದಲ್ಲಿ 15 ಜಿಲ್ಲೆಗಳ ಫಲಾನುಭವಿಗಳು ಮೊದಲಿಗೆ ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣವನ್ನು ಪಡೆಯುತ್ತಿದ್ದಾರೆ.

ಆ 15 ಜಿಲ್ಲೆಗಳ ಪಟ್ಟಿ
*ಕೋಲಾರ
* ಮಂಡ್ಯ
* ದಾವಣಗೆರೆ
* ಚಿತ್ರದುರ್ಗ
* ಬಾಗಲಕೋಟೆ
* ಹಾಸನ
* ಉತ್ತರ ಕನ್ನಡ
* ಬೆಂಗಳೂರು
* ಬೆಳಗಾವಿ
* ಗದಗ
* ಧಾರವಾಡ
* ಕಲ್ಬುರ್ಗಿ
* ಮೈಸೂರು
* ಬಿಜಾಪುರ
* * ರಾಯಚೂರು

ಆಗಸ್ಟ್ ತಿಂಗಳಿನಿಂದ ನವೆಂಬರ್ ತಿಂಗಳವರೆಗೆ ಯಶಸ್ವಿಯಾಗಿ ಈವರೆಗೆ ಮೂರು ಕಂತಿನ ಹಣಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ, ಆದರೆ ಪೂರ್ತಿಯಾಗಿ ಎಲ್ಲಾ ಮಹಿಳೆಯರಿಗೂ ಕೂಡ ಗೃಹಲಕ್ಷ್ಮಿ ಯೋಜನೆ ಹಣ ತಲುಪಿಲ್ಲ. ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗದೆ ಇರುವುದು, ಬ್ಯಾಂಕ್ ಖಾತೆಗಳು ಆಕ್ಟಿವ್ ಆಗಿಲ್ಲದೇ ಇರುವುದು ಹಣ ಬಾರದೇ ಇರಲು ಕಾರಣವಾಗಿದೆ.

ಯಜಮಾನಿಯರ ಬ್ಯಾಂಕ್ ಖಾತೆಯಲ್ಲಾದ ಹಲವು ತಾಂತ್ರಿಕ ದೋಷಗಳು ಹಾಗೂ ಕೆಲವು ತಾಂತ್ರಿಕ ತೊಂದರೆಗಳಿಂದ ಇನ್ನೂ ಕೆಲವು ಯಜಮಾನಿಯರ ಖಾತೆಗೆ ಹಣ ಬಂದಿಲ್ಲ. ಹಣ ಜಮೆಯಾಗದೇ ಇರುವವರ ಬಳಿ ಸರ್ಕಾರ ಹೋಗಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದು, ಇನ್ನೂ ಹಣ ಸಿಗದವರು ಅದಾಲತ್ ನಲ್ಲಿ ದೂರು ಕೊಡಬಹುದು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read