ಸಚಿವರು ಸೇರಿದಂತೆ ಖುದ್ದು ಮಾಲೀಕನನ್ನೇ ಬಲಿ ಪಡೆದಿತ್ತು ನೇಪಾಳದ ಯೇತಿ ಏರ್‌ಲೈನ್ಸ್‌

ನೇಪಾಳ: ನೇಪಾಳದ ಯೇತಿ ಏರ್‌ಲೈನ್ಸ್‌ ಎರಡು ದಿನಗಳ ಹಿಂದೆ ಅಪಘಾತಕ್ಕೀಡಾಗಿ 72 ಜನರು ಮೃತಪಟ್ಟಿದ್ದಾರೆ. ಈ ಏರ್​ಲೈನ್ಸ್​ ಮೂರು ವರ್ಷಗಳ ಹಿಂದೆಯೂ ಹೀಗೆ ಅಪಘಾತಕ್ಕೊಳಗಾಗಿತ್ತು. ಆಗ ಖುದ್ದು ವಿಮಾನಯಾನದ ಮಾಲೀಕ, ಉದ್ಯಮಿ ಆಂಗ್ ತ್ಶೆರಿಂಗ್ ಶೆರ್ಪಾ ಅವರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಫೆಬ್ರವರಿ 2019 ರಲ್ಲಿ ಈ ದುರಂತ ಸಂಭವಿಸಿತ್ತು.

ನೇಪಾಳದ ಆಗಿನ ವಿಮಾನಯಾನ ಸಚಿವ ರವೀಂದ್ರ ಅಧಿಕಾರಿ ತಮ್ಮ ಸಹ ಮಂತ್ರಿಗಳೊಂದಿಗೆ ಟೆರ್ತುಮ್ ಜಿಲ್ಲೆಯಲ್ಲಿ ಹೊಸ ವಿಮಾನ ನಿಲ್ದಾಣದ ಕಾರ್ಯಸಾಧ್ಯತೆಯ ಅಧ್ಯಯನವನ್ನು ನಡೆಸಲು ಹೋಗಿದ್ದರು. ಆಂಗ್ ತ್ಶೆರಿಂಗ್ ಶೆರ್ಪಾ ಅವರು ಹೆಲಿಕಾಪ್ಟರ್‌ನಲ್ಲಿ ಮಂತ್ರಿಗಳ ಜೊತೆಗಿದ್ದರು.
ಆರು ಜನರೊಂದಿಗೆ ಬೆಳಗ್ಗೆ 6 ಗಂಟೆ ಸುಮಾರಿಗೆ ಹೆಲಿಕಾಪ್ಟರ್ ಟೇಕಾಫ್ ಆಗಿತ್ತು. ಹಿಂತಿರುಗುವಾಗ, ಹೆಲಿಕಾಪ್ಟರ್ ಪರ್ವತದ ತುದಿಗೆ ಅಪ್ಪಳಿಸಿತು,

ಎಲ್ಲಾ ಪ್ರಯಾಣಿಕರು ಮತ್ತು ಪೈಲಟ್ ಸಾವನ್ನಪ್ಪಿದ್ದರು. ಐದು ಆಸನಗಳ ಹೆಲಿಕಾಪ್ಟರ್‌ನಲ್ಲಿ ಆರು ಮಂದಿ ಇದ್ದರು ಎಂಬುದು ಗಮನಾರ್ಹ.
ಹೆಲಿಕಾಪ್ಟರ್ ನೇಪಾಳದ ಅತ್ಯಂತ ಹಳೆಯ ಹೆಲಿಕಾಪ್ಟರ್ ಪಾರುಗಾಣಿಕಾ ಕಂಪೆನಿಗಳಲ್ಲಿ ಒಂದಾದ ಏರ್ ಡೈನಾಸ್ಟಿ ಹೆಲಿ ಸರ್ವೀಸ್‌ಗೆ ಸೇರಿದೆ.

ನಾಗರಿಕ ವಿಮಾನಯಾನ ಸಚಿವರಲ್ಲದೆ, ಅವರ ಪಿಎಸ್‌ಒ, ನಾಗರಿಕ ವಿಮಾನಯಾನ ಪ್ರಾಧಿಕಾರದ ಉಪ ಮಹಾನಿರ್ದೇಶಕ, ಸಚಿವಾಲಯದ ನಿರ್ದೇಶಕ ಮತ್ತು ಉಪ ಕಾರ್ಯದರ್ಶಿ ಆಂಗ್ ತ್ಶೆರಿಂಗ್ ಶೆರ್ಪಾ ಅವರ ಸಾವು ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read