‘ಅಸಾದುದ್ದೀನ್ ಓವೈಸಿ’ ಪ್ಯಾಲೆಸ್ತೈನ್ ಪರ ಘೋಷಣೆ ಕೂಗಿದ್ದು ಅಸಂವಿಧಾನಿಕ ಅಲ್ಲ : ನಟ ಚೇತನ್ ಅಹಿಂಸಾ

ಬೆಂಗಳೂರು : ಓವೈಸಿ ಪ್ಯಾಲೆಸ್ತೈನ್ ಪರವಾಗಿ ಘೋಷಣೆ ಕೂಗುವುದರಲ್ಲಿ ಅಸಂವಿಧಾನಿಕ ಏನೂ ಇಲ್ಲ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಚೇತನ್ ಅಹಿಂಸಾ ‘ಸಂಸತ್ತಿನಲ್ಲಿ ‘ಜೈ ಪ್ಯಾಲೆಸ್ಟೈನ್’ ಘೋಷಣೆ ಕೂಗಿದ ಸಂಸದ ಅಸಾದುದ್ದೀನ್ ಓವೈಸಿನ ಅನ್ಯಾಯವಾಗಿ ಗುರಿಯಾಗಿಸಲಾಗುತ್ತಿದೆ
ಓವೈಸಿ ಪ್ಯಾಲೆಸ್ಟೈನ್ ಪರವಾಗಿ ಘೋಷಣೆ ಕೂಗುವುದರಲ್ಲಿ ಅಸಂವಿಧಾನಿಕ ಏನೂ ಇಲ್ಲ— ವಾಸ್ತವವಾಗಿ, ಇದು ಜಗತ್ತಿನಾದ್ಯಂತ ಎಲ್ಲಾ ಅನ್ಯಾಯದ ವಿರುದ್ಧದ ಅವರ ಹೋರಾಟವನ್ನು ಬಲಪಡಿಸುತ್ತದೆ.ನಮ್ಮ ಭಾರತೀಯ ಸಂಸದರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಜಾಗೃತರಾಗಿರಬೇಕು’ ಎಂದು ಹೇಳಿದ್ದಾರೆ.

ನಿನ್ನೆ ಅಸಾದುದ್ದೀನ್ ಓವೈಸಿ ಸಂಸದರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಂದರ್ಭದಲ್ಲಿ ಜೈ ಪ್ಯಾಲೆಸ್ತೀನ್ ಎಂದು ಘೋಷಣೆ ಕೂಗಿದ್ದರು. ಆದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ  ವಿವಿಧ ಪಕ್ಷಗಳ ನಾಯಕರು ಆಗ್ರಹಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read