ಯೋಗಿ ಸರ್ಕಾರ ಬಂದಾಗಿನಿಂದ ಆಗಿರುವ ಎನ್‌ಕೌಂಟರ್‌ಗಳ ಸಂಖ್ಯೆ ಎಷ್ಟು ಗೊತ್ತಾ…..?

ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್‌ ಅಧಿಕಾರಕ್ಕೆ ಬಂದ ಆರು ವರ್ಷಗಳಲ್ಲಿ ಕ್ರಿಮಿನಲ್‌ಗಳನ್ನು ಮಟ್ಟ ಹಾಕಲು ರಾಜ್ಯದಲ್ಲಿ 10,000ಕ್ಕೂ ಹೆಚ್ಚು ಎನ್‌ಕೌಂಟರ್‌ಗಳನ್ನು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಮೀರತ್‌ ಜಿಲ್ಲೆಯಲ್ಲಿ 3,152 ಎನ್‌ಕೌಂಟರ್‌ಗಳು ನಡೆದಿದ್ದು, ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ಎನ್‌ಕೌಂಟರ್‌ಗಳಲ್ಲಿ 63 ಕ್ರಿಮಿನಲ್‌ಗಳು ಮೃತಪಟ್ಟಿದ್ದು, 1,708 ಮಂದಿ ಗಾಯಗೊಂಡಿದ್ದಾರೆ.

ಈ ಎನ್‌ಕೌಂಟರ್‌‌ಗಳಲ್ಲಿ ಒಬ್ಬ ಪೊಲೀಸ್‌ ಸಿಬ್ಬಂದಿ ಮೃತಪಟ್ಟಿದ್ದು, 401 ಪೇದೆಗಳಿಗೆ ಗಾಯಗಳಾಗಿವೆ. ಒಟ್ಟಾರೆ 5,967 ಕ್ರಿಮಿನಲ್‌ಗಳನ್ನು 2017ರಿಂದ ಪೊಲೀಸರು ರಾಜ್ಯದಲ್ಲಿ ಸೆರೆ ಹಿಡಿದಿದ್ದಾರೆ.

ಮಿಕ್ಕಂತೆ ಆಗ್ರಾದಲ್ಲಿ 1,844 ಎನ್‌ಕೌಂಟರ್‌ಗಳು ನಡೆದಿದ್ದು, 4,654 ಕ್ರಿಮಿನಲ್‌ಗಳನ್ನು ಬಂಧಿಸಿ 14 ಕ್ರಿಮಿನಲ್‌ಗಳನ್ನು ಕೊಲ್ಲಲಾಗಿದೆ. ಇದೇ ವೇಳೆ 55 ಪೊಲೀಸರು ಗಾಯಗೊಂಡಿದ್ದಾರೆ.

ಬರೇಯ್ಲಿಯಲ್ಲಿ 1,497 ಎನ್‌ಕೌಂಟರ್‌ಗಳು ಜರುಗಿದ್ದು, 3,410 ಕ್ರಿಮಿನಲ್‌ಗಳನ್ನು ಕೊಂದು ಏಳು ಮಂದಿಯನ್ನು ಬಂಧಿಸಲಾಗಿದೆ. ಇದೇ ವೇಳೆ 437 ಕ್ರಿಮಿನಲ್‌ಗಳು ಗಾಯಗೊಂಡಿದ್ದಾರೆ.

ಈ ಎಲ್ಲ ಕ್ರಮಗಳ ಫಲವಾಗಿ ಹಿಂದೊಮ್ಮೆ ಗೂಂಡಾಗಳ ರಾಜ್ಯವೆಂದೇ ಕುಖ್ಯಾತಿ ಪಡೆದಿದ್ದ ಉತ್ತರ ಪ್ರದೇಶ ಇಂದು ಅಪರಾಧ ಮುಕ್ತ ರಾಜ್ಯಗಳಲ್ಲಿ ಒಂದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read