ನಾಳೆ ತೆರೆ ಮೇಲೆ ಬರಲಿದೆ ‘out of ಸಿಲಬಸ್’

ಪ್ರದೀಪ್ ದೊಡ್ಡಯ್ಯ ನಟಿಸಿ ನಿರ್ದೇಶಿಸಿರುವ ‘out of ಸಿಲಬಸ್’ ಚಿತ್ರ ಈಗಾಗಲೇ ತನ್ನ ಟ್ರೈಲರ್ ಹಾಗೂ ಹಾಡುಗಳಿಂದ  ಪ್ರೇಕ್ಷಕರ ಗಮನ ಸೆಳೆದಿದ್ದು, ನಾಳೆ  ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ.

ಈ ಸಿನಿಮಾವನ್ನು ಏಕೆ ನೋಡಬೇಕು ಎಂಬುದನ್ನು ಇನ್ಸ್ಟಾಗ್ರಾಮ್ ನಲ್ಲಿ  ವಿವರಿಸಿದ್ದು, ‘ಎರಡು ವರ್ಷಗಳ ಕನಸಿಗೆ ಎರಡು ಗಂಟೆ ನಿಮ್ಮ ಸಮಯ ನೀಡಿ’ ಎಂದು ಬರೆದುಕೊಂಡಿದ್ದಾರೆ.

ಈ ಚಿತ್ರದಲ್ಲಿ ಪ್ರದೀಪ್ ದೊಡ್ಡಯ್ಯ ಸೇರಿದಂತೆ ರಿತಿಕಾ ಶ್ರೀನಿವಾಸ್, ಅಚ್ಯುತ್ ಕುಮಾರ್, ಯೋಗರಾಜ್ ಭಟ್, ರಾಮಕೃಷ್ಣ, ಚಿತ್ಕಲಾ ಬಿರಾದಾರ್, ಮಂಜು ಪಾವಗಡ,  ಬಣ್ಣ ಹಚ್ಚಿದ್ದು, ತನುಷ್ ಎಸ್ ವಿ ದೇಸಾಯಿ ಗೌಡ – ಶ್ರೀಮತಿ. ಕೆ ವಿಜಯಕಲಾ ಸುಧಾಕರ್ ನಿರ್ಮಾಣ ಮಾಡಿದ್ದಾರೆ.

ಉಮೇಶ್ ಆರ್ ಬಿ ಸಂಕಲನ, ದೇವ್ ವಡ್ಡೆ  ಛಾಯಾಗ್ರಹಣವಿದೆ. ಶ್ರೀಹರಿ ಪ್ರೇಮ್ ಭರತ್, ಪ್ರಜ್ವಲ್ ಎನ್, ಗಿರೀಶ್ ಹೋತೂರ್, ಡಿ. ಶ್ರೀನಿವಾಸ್ ಆಚಾರ್, ಜೋಶ್ವಾ ಶ್ರೀಧರ್ ಅವರ ಸಂಗೀತ ನಿರ್ದೇಶನವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read