ಇತ್ತೀಚಿಗಷ್ಟೇ ತನ್ನ ಟ್ರೈಲರ್ ನಿಂದ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಪ್ರದೀಪ್ ದೊಡ್ಡಯ್ಯ ನಟಿಸಿ ನಿರ್ದೇಶಿಸಿರುವ ‘Out of ಸಿಲಬಸ್’ ಚಿತ್ರ ಇದೇ ಡಿಸೆಂಬರ್ 27ರಂದು ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ. ಈ ಕುರಿತು ಚಿತ್ರ ತಂಡ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ.
ಈ ಚಿತ್ರದಲ್ಲಿ ಪ್ರದೀಪ್ ದೊಡ್ಡಯ್ಯ ,ರಿತಿಕಾ ಶ್ರೀನಿವಾಸ್, ಅಚ್ಯುತ್ ಕುಮಾರ್, ಯೋಗರಾಜ್ ಭಟ್, ರಾಮಕೃಷ್ಣ, ಚಿತ್ಕಲಾ ಬಿರಾದಾರ್, ಮಂಜು ಪಾವಗಡ, ತಾರಾಂಗಣದಲ್ಲಿದ್ದು, ದೇವ್ ವಡ್ಡೆ ಛಾಯಾಗ್ರಹಣ, ಹಾಗೂ ಉಮೇಶ್ ಆರ್ ಬಿ ಸಂಕಲನವಿದೆ. AD6 ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ತನುಷ್ ಎಸ್ ವಿ ದೇಸಾಯಿ ಗೌಡ – ಶ್ರೀಮತಿ. ಕೆ ವಿಜಯಕಲಾ ಸುಧಾಕರ್ ನಿರ್ಮಾಣ ಮಾಡಿದ್ದಾರೆ. ಇನ್ನುಳಿದಂತೆ ಶ್ರೀಹರಿ ಪ್ರೇಮ್ ಭರತ್, ಪ್ರಜ್ವಲ್ ಎನ್, ಗಿರೀಶ್ ಹೋತೂರ್, ಡಿ. ಶ್ರೀನಿವಾಸ್ ಆಚಾರ್, ಜೋಶ್ವಾ ಶ್ರೀಧರ್ ಸಂಗೀತ ನಿರ್ದೇಶನ ಮಾಡಿದ್ದಾರೆ.