ಗಮನಿಸಿ : ‘ಸಶಸ್ತ್ರ ಪೊಲೀಸ್ ಕಾನ್ಸ್ ಸ್ಟೇಬಲ್’ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬಳ್ಳಾರಿ : 2022-23 ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶದ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (ಪುರುಷ) ಮತ್ತು ತೃತೀಯ ಲಿಂಗ ಪುರುಷ (ಸಿಎಆರ್/ಡಿಎಆರ್) 420 ಹುದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆಯು ಸೆ.10 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12.30 ರವರೆಗೆ ಬಳ್ಳಾರಿ ನಗರದ 13 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ತಿಳಿಸಿದ್ದಾರೆ.

ಅರ್ಹ ಅಭ್ಯರ್ಥಿಗಳು ಪರೀಕ್ಷೆಗೆ ವೆಬ್ಸೈಟ್ನಿಂದ ಲಿಖಿತ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಪಡೆದುಕೊಂಡು, ಯಾವುದಾದರೂ ಮೂಲ ಗುರುತಿನ ಚೀಟಿಯನ್ನು ತಪ್ಪದೇ ಪರೀಕ್ಷೆಯಲ್ಲಿ ಹಾಜರುಪಡಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ತರಹದ ವಿದ್ಯುನ್ಮಾನ ಮತ್ತು ಇತರೆ ಉಪಕರಣಗಳನ್ನು ಕಡ್ಡಾಯವಾಗಿ ನಿರ್ಭಂದಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರಗಳ ಹೆಸರು ಮತ್ತು ವಿಳಾಸ

ಗಾಂಧಿನಗರದ 2ನೇ ಕ್ರಾಸ್ನ ಬಾಲ ಭಾರತಿ ಶಾಲೆ, ಸಿರುಗುಪ್ಪ ರಸ್ತೆಯ ಕುರಿಹಟ್ಟಿಯ ಬಳ್ಳಾರಿ ಬ್ಯುಸಿನೆಸ್ ಕಾಲೇಜ್, ಅಲ್ಲೀಪುರದ ಬಳ್ಳಾರಿ ಇಂಡಿಪೆಂಡಂಟ್ ಪಿಯು ಕಾಲೇಜ್(ಬೆಸ್ಟ್), ಅನಂತಪುರ ರಸ್ತೆಯ ಪಟೇಲ್ ನಗರದ ಬಸವರಾಜೇಶ್ವರಿ ಪಬ್ಲಿಕ್ ಶಾಲೆ ಮತ್ತು ಕಾಲೇಜು, ಮೀಸಲು ಪೊಲೀಸ್ ಪರೇಡ್ ಗ್ರೌಂಡ್ ರಸ್ತೆಯ ಎಂಜಿಎಂ ಪ್ರಾಥಮಿಕ ಹಾಗೂ ಪದವಿ ಪೂರ್ವ ಕಾಲೇಜು, ಪಟೇಲ್ ನಗರದ ನಂದಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್ ಕಾಲೇಜು, ಹವಾಂಭಾವಿ ಹತ್ತಿರದ ಹೊಸ ಚೈತನ್ಯ ಕಾಲೇಜು, ಕಂಟೋನ್ಮೆಂಟ್ನ ರಾವ್ ಬಹದ್ದೂರ್ ವೈ ಮಹಾಬಲೇಶ್ವರ ಇಂಜಿನಿಯರಿಂಗ್ ತಾಂತ್ರಿಕ ಮಹಾವಿದ್ಯಾಲಯ, ವೈ.ನಾಗೇಶ ಶಾಸ್ತ್ರಿ ನಗರದ ಎಸ್ಜಿ ಪಿಯು ಕಾಲೇಜು, ಕೋಟೆ ಪ್ರದೇಶದ ಶ್ರೀ ಮೇಧಾ ಡಿಗ್ರಿ ಕಾಲೇಜು, ಅಲ್ಲಂ ಸುಮಂಗಳಮ್ಮ ಮೆಮೊರೀಯಲ್ ಮಹಿಳೆಯರ ಕಾಲೇಜು, ಎಸ್ಎನ್ ಪೇಟೆಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಪ್ರಥಮ ದರ್ಜೆ ಕಾಲೇಜು ಹಾಗೂ ಕಾಳಮ್ಮ ರಸ್ತೆಯ ವಾಡ್ರ್ಲಾ ಪಿಯು ಕಾಲೇಜು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read