ಮಹಿಳೆಯರಿಗೆ ದಸರಾ ಪ್ರಯುಕ್ತ ಕ್ರೀಡಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ , ನೋಂದಣಿಗೆ ಆಹ್ವಾನ

ಶಿವಮೊಗ್ಗ : ಮಹಾನಗರಪಾಲಿಕೆ ಮಹಿಳಾ ದಸರಾ ಸಮಿತಿಯ ವತಿಯಿಂದ ಮಹಿಳಾ ದಸರಾ ಕಾರ್ಯಕ್ರಮದ ಅಂಗವಾಗಿ ಪಾಲಿಕೆ ವ್ಯಾಪ್ತಿಯಲ್ಲಿನ ಮಹಿಳೆಯರಿಗೆ ಮತ್ತು ಮಹಿಳಾ ಸಂಘ ಸಂಸ್ಥೆಗಳಿಗೆ ಕ್ರೀಡೆ, ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ವೀರಶೈವ ಕಲ್ಯಾಣ ಮಂದಿರ ಮತ್ತು ನಿಜಲಿಂಗಪ್ಪ ಸಭಾಭವನ ಆವರಣದಲ್ಲಿ ಅಕ್ಟೋಬರ್ 25 ರಂದು ಬೆಳಿಗ್ಗೆ 09 ಗಂಟೆಯಿAದ ರಂಗೋಲಿ ಸ್ಪರ್ಧೆ, ಥ್ರೋಬಾಲ್, ಮ್ಯುಸಿಕಲ್ಛೇರ್, ಪಾಸಿಂಗ್ ದ ಬಾಲ್, ಹಗ್ಗಜಗ್ಗಾಟ, ಸ್ಪರ್ದೆಯನ್ನು ಏರ್ಪಡಿಸಲಾಗಿದೆ.ಅಕ್ಟೋಬರ್ 04 ರಂದು ನಗರದ ಕುವೆಂಪು ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಆಸಕ್ತ ಮಹಿಳಾ ತಂಡಗಳು ಸೆ. 17 ರ ಸಂಜೆಯೊಳಗಾಗಿ ಹೆಸರನ್ನು ನೊಂದಾಯಿಸಬಹುದಾಗಿದೆ. ಮೊದಲು ನೊಂದಾಯಿಸಿದ 15 ತಂಡಕ್ಕೆ ಮಾತ್ರ ಅವಕಾಶ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಶ್ರೀಮತಿ ಉಷಾ ಮೊ ನಂ.8495820268, ಶ್ರಿಮತಿ ಯಶಸ್ವಿನಿ ಮೊ ನಂ. 9620485642 ಸಂಪರ್ಕಿಸಬಹುದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read