ಗೋಕರ್ಣದ ತೀರಾ ಅಪಾಯಕಾರಿ ಸ್ಥಳವಾದ ಜಟಾಯು ತೀರ್ಥಕ್ಕೆ ಟ್ರೆಕ್ಕಿಂಗ್ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಗೋಕರ್ಣದ ವಿವಿಧ ಸ್ಥಳಗಳಲ್ಲಿ ಪ್ರವಾಸಿಗರು ಚಾರಣಕ್ಕೆ ತೆರಳುವುದನ್ನು ಕೂಡ ಅರಣ್ಯ ಇಲಾಖೆ ನಿರ್ಬಂಧಿಸಿದ್ದು, ಈ ಸಂಬಂಧ ಸೂಚನಾ ಫಲಕ ಮತ್ತು ತಂತಿ ಬೇಲಿ ನಿರ್ಮಾಣ ಕಾರ್ಯ ಆರಂಭವಾಗಿದೆ.
ಇತ್ತೀಚೆಗೆ ಸ್ಥಳೀಯರು ಮತ್ತು ಹೊರಹೊರಿನ ಟ್ರಾವೆಲ್ ಏಜೆನ್ಸಿಯವರು ಕುಡ್ಲೆ, ಓಂ ಬೀಚ್ ಗಳಿಂದ ಪ್ಯಾರಡೈಸ್, ಹಾಫ್ ಮೂನ್ ಬೀಚ್ ಗಳಿಗೆ ಪ್ರವಾಸಿಗರನ್ನು ಚಾರಣಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಸಮುದ್ರದಂಚಿನ ಪರ್ವತದ ಮೇಲಿನ ಕಡಿದಾದ ಮಾರ್ಗದಲ್ಲಿ ಸಾಗುತ್ತಿದ್ದರು. ಭಾನುವಾರದಿಂದ ಈ ಮಾರ್ಗವನ್ನು ಬಂದ್ ಮಾಡಲಾಗಿದೆ. ನಿಯಮ ಮೀರಿ ಟ್ರೆಕ್ಕಿಂಗ್ ತೆರಳುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಏಪ್ರಿಲ್ 24ರಂದು ಚಾರಣಕ್ಕೆ ತೆರಳಿದ್ದ ತಮಿಳುನಾಡಿನ ಇಬ್ಬರು ವೈದ್ಯಕೀಯ ವಿದ್ಯಾರ್ಥಿನಿಯರು ಜಟಾಯು ತೀರ್ಥದ ಬಳಿ ಸಮುದ್ರದ ಅಲೆ ಬಡಿದು ಕೊಚ್ಚಿ ಹೋಗಿದ್ದರು.